
ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ” ಕ್ರಿಯೇಟಿವ್ ಸಮಾಗಮ “5 ಜುಲೈ 2024 ರಂದು ಕಾಲೇಜಿನ ‘ಸಪ್ತಸ್ವರ’ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪಠ್ಯೇತರ ಚಟುವಟಿಕೆಗಳನ್ನೊಳಗೊಂಡ ವಿವಿಧ ಸಂಘಗಳನ್ನು ಉದ್ಘಾಟಿಸಲಾಯಿತು. ಕಾಲೇಜಿನ ತ್ರೈಮಾಸಿಕವಾದ ” ನಿನಾದ ” ಪತ್ರಿಕೆಯ ಏಳನೇ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಸ್ಥಾಪಕರಾದ ಶ್ರೀಯುತ ಅಮೃತ್ ರೈ, ವಿದ್ವಾನ್ ಗಣಪತಿ ಭಟ್ ರವರು ವಿವಿಧ ಸಂಘಗಳ ಉದ್ಘಾಟನೆಯನ್ನು ನೆರವೇರಿಸಿದರು. ಸಹಸಂಸ್ಥಾಪಕರಾದ ಶ್ರೀಯುತ ಆದರ್ಶ ಎಂ. ಕೆ ರವರು “ನಿನಾದ” ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಸಂಸ್ಥಾಪಕರಾದ ಗಣಪತಿ ಭಟ್ ಕೆ. ಎಸ್, ಅಶ್ವತ್ ಎಸ್. ಎಲ್ ರವರು ಗೌರವ ಉಪಸ್ಥಿತರಾಗಿದ್ದರು.
ಉಪನ್ಯಾಸಕರಾದ ವಿನಾಯಕ್ ಜೋಗ್ ಹಾಗೂ ಶ್ರೀನಿಧಿ ಎಸ್ ನಾಯಕ್ ರವರು ಸ್ವಾಗತಿಸಿದರು. ಭಾಷಾ ಉಪನ್ಯಾಸಕಿಯರಾದ ವೃಂದಾ ದಾತೆ ಹಾಗೂ ಪ್ರಿಯಾಂಕ ತೀರ್ಥರಾಮ ರವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ಸಮಾರಂಭದಲ್ಲಿ ಉಪನ್ಯಾಸಕ ವರ್ಗದವರು, ಬೋಧಕೇತರ ಸಿಬ್ಬಂದಿಗಳು, ವಸತಿ ನಿಲಯ ಪಾಲಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.