
ಕಾರ್ಕಳದಲ್ಲಿ ಜುಗಾರಿ ಅಡ್ಡೆಗಳಿಗೆ ಕಡಿವಾಣ ಹಾಕಿದ ಪೊಲೀಸರು ಜುಗಾರಿ ಅಡ್ಡೆಗಳ ಸದ್ದನ್ನು ಅಡಗಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಈಗ ಪುನ: ಆಟ ಶುರು ಮಾಡಿಕೊಂಡಿರುವ ಜುಗಾರಿ ಅಡ್ಡೆಗಳ ಮೇಲೆ ಪೊಲೀಸರು ದಾಳಿ ನಡೆಸಿ 8 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಜು 5 ರಂದು ಬೋಳ ಗ್ರಾಮದ ಪೊಸರ್ಮೆ ಎಂಬಲ್ಲಿ ಶ್ರೀನಿವಾಸ್ ಎಂಬರಿಗೆ ಸಂಬಂಧಪಟ್ಟ ಹಳೆ ರೈಸ್ ಮಿಲ್ ನ ಶೆಡ್ ನಲ್ಲಿ ರವೀಂದ್ರ ಶಿವಾನಂದ, ಶ್ರೀನಿವಾಸ, ಸಂತೋಷ್, ಶ್ರೀನಿವಾಸ, ಅಶೋಕ್, ರಾಜೇಶ್, ಕೃಷ್ಣ ಎಂಬವರು ಜುಗಾರಿ ಆಟವನ್ನು ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಕಾರ್ಕಳ ಗ್ರಾಮಂತರ ಪೊಲೀಸ್ ಉಪನಿರೀಕ್ಷಕ ದಿಲೀಪ್ ಜಿ ಆರ್ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ಆಟಕ್ಕೆ ಬಳಸಿದ್ದ 25,720 ನಗದು ಹಾಗೂ 159 ಇಸ್ಪೀಟ್ ಎಳೆಗಳನ್ನು ಮತ್ತು ಕಾರನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.