
ಕಾರ್ಕಳ:ಭಾವಶಾಲಿ ಮಾಧ್ಯಮವಾಗಿರುವ ಚಲನಚಿತ್ರವಿಂದು ಬೆಳೆದು ದೊಡ್ಡ ಉದ್ಯಮವಾಗಿದೆ. ಜನರ ಭಾವನೆ ಮತ್ತು ಜೀವನದ ಮೇಲೆ ಗಾಢ ಪ್ರಭಾವ ಬೀರುತ್ತಿದೆ.ಸಿನೆಮಾ ಮಂದಿರಗಳಲ್ಲಿ ಬಿಡುಗಡೆ ಕಾಣದ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪುರಸ್ಕಾರ ಪಡೆದು ಚಲನ ಚಿತ್ರಗಳು ಜನರಿಗೆ ಮುಟ್ಟಿಸುವಲ್ಲಿ ಇಂತಹ ಚಲನ ಚಿತ್ರ ಉತ್ಸವಗಳು ನೆರವಾಗುತ್ತವೆ ಎಂದು ಖ್ಯಾತ ಚಲನಚಿತ್ರ ನಿರ್ದೇಶಕರಾದ ಸುಧೀರ್ ಶ್ಯಾನುಭೋಗ್ ಕಾರ್ಕಳ ಹೇಳಿದರು.
ಅವರು ರಂಗಸಂಸ್ಕ್ರತಿ ಕಾರ್ಕಳ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿ ಬೆಂಗಳೂರು ಸಂಯೋಜನೆಯ ಬೆಳ್ಳಿಮಂಡಲ ಕಾರ್ಕಳ ಇವರ ಸಹಯೋಗದಲ್ಲಿ ಕಾರ್ಕಳದ ಪ್ರಕಾಶ್ ಹೋಟೆಲ್ ನ ಉತ್ಸವ ಸಭಾಂಗಣದಲ್ಲಿ ನಡೆಯುತ್ತಿರುವ “ಅಮೃತವರ್ಷಿಣಿ” ರಾಷ್ಟ್ರೀಯ ಪುರಸ್ಕಾರ ಪಡೆದ ಚಲನಚಿತ್ರ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು
ಚಿತ್ರೋತ್ಸವವನ್ನು ಉದ್ಘಾಟಿಸಿ ಹಿರಿಯ ಸಾಹಿತಿ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಾಯರಾದ ಸಾವಿತ್ರಿ ಮನೋಹರರವರು ಮಾತಾನಾಡುತ್ತಾ ಶ್ರೇಷ್ಠ ಕಲಾತ್ಮಕ ಚಿತ್ರಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವಲ್ಲಿ ಪ್ರಮುಖ ಪಾತ್ರವಹಿಸುವ ಇಂತಹ ಚಿತ್ರೋತ್ಸವಗಳು ಹೆಚ್ಚಿನ ಕಡೆಗಳಲ್ಲಿ ನಡೆಯುವಂತಾಗಲೆಂದು ಶುಭ ಹಾರೈಸಿದರು.ರಂಗ ಸಂಸ್ಕೃತಿಯ ಅಧ್ಯಕ್ಷರ ಉದ್ಯಮಿ ನಿತ್ಯಾನಂದ ಪೈಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಚಿತ್ರೋತ್ಸವ ಯಶಸ್ಸಿಗೆ ಎಲ್ಲರ ಸಹಕಾರ ಕೋರಿದರು.
ವೇದಿಕೆಯಲ್ಲಿ ರಂಗ ಸಂಸ್ಕೃತಿಯ ಉಪಾಧ್ಯಕ್ಷರಾದ ರಾಮಚಂದ್ರ ಟಿ ನಾಯಕ್ ಉಪಸ್ಥಿತರಿದ್ದರು.ಚಿತ್ರೋತ್ಸವ ಸಮಿತಿಯ ಸಂಚಾಲಕರಾದ ಕೊಂಡಳ್ಳಿ ಪ್ರಭಾಕರ ಶೆಟ್ಟಿಯವರು ಪ್ರಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಕಾರ್ಯಕಾರಿ ಸಮಿತಿಯ ಸದಸ್ಯರಾದ ಗಣೇಶ್ ಜಾಲ್ಸೂರು ಕಾರ್ಯಕ್ರಮ ನಿರೂಪಿಸಿ ಶಿವಸುಬ್ರಹ್ಮಣ್ಯ ಭಟ್ ಸಹಕರಿಸಿದರು.
ಸಭಾ ಕಾರ್ಯಕ್ರಮದ ನಂತರ ರಾಷ್ಟ್ರೀಯ ಪುರಸ್ಕಾರ ಪಡೆದ ಅನನ್ಯ ಕಾಸರವಳ್ಳಿ ನಿರ್ದೇಶನದ ” ಹರಿಕಥಾ ಪ್ರಸಂಗ” ಚಲನಚಿತ್ರ ಪ್ರದರ್ಶನ ಯಶಸ್ವಿಯಾಗಿ ನಡೆಯಿತು.