
ಕಾರ್ಕಳ: ರೋಟರಿ ಜಿಲ್ಲೆ 3182 ಇದರ ರೋಟರಾಕ್ಟ್ ಜಿಲ್ಲಾ ಪ್ರತಿನಿಧಿಯಾಗಿ ಆಯ್ಕೆಗೊಂಡ Rtr. ಚೇತನ್ ಕುಮಾರ್ ಮತ್ತು ಜಿಲ್ಲಾ ಮಂಡಳಿಯ ಪದಗ್ರಹಣ ಕಾರ್ಯಕ್ರಮವು ದಿನಾಂಕ 07-07-2024 ರಂದು ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ SR ಹಾಲ್ ನಲ್ಲಿ ಜರಗಿತು.

ರೋಟರಿ ಜಿಲ್ಲೆ 3182ರ ಜಿಲ್ಲಾ ಗವರ್ನರ್ ಆದ Rtn. MPHF CA ದೇವ್ ಆನಂದ್ ಇವರು ಪದಗ್ರಹಣವನ್ನು ನೆರವೇರಿಸಿಕೊಟ್ಟರು. ಪದಗ್ರಹಣ ನೆರವೇರಿಸಿ ಮಾತನಾಡಿದ ಅವರು ಸಮಾಜದಲ್ಲಿ ಉತ್ತಮ ನಾಯಕರಾಗಿ ಮೂಡಿಬರಲು ರೋಟರಾಕ್ಟ್ ಒಂದು ಉತ್ತಮ ವೇದಿಕೆ ಎಂದು ಅಭಿಪ್ರಾಯಪಟ್ಟರು.
2024-25 ನೇ ಸಾಲಿನ ಜಿಲ್ಲಾ ಪ್ರತಿನಿಧಿಯಾಗಿ ಅಧಿಕಾರ ಸ್ವೀಕರಿಸಿದ ಕಾರ್ಕಳ ರೋಟರಾಕ್ಟ್ ಕ್ಲಬ್ಬಿನ Rtr. ಚೇತನ್ ಕುಮಾರ್ ಇವರು ತಮ್ಮ ಜಿಲ್ಲಾ ಲಾಂಛನವನ್ನು ಬಿಡುಗಡೆಗೊಳಿಸಿ, ತಮ್ಮ ಒಂದು ವರ್ಷದ ಕಾರ್ಯ ಯೋಜನೆಗಳನ್ನು ಸಭೆಯಲ್ಲಿ ಹಂಚಿಕೊಂಡರು ಮತ್ತು ಜಿಲ್ಲಾಮಂಡಳಿಯ ಕಾರ್ಯಕಾರಿಣಿ ಸಮಿತಿಯ ಸದಸ್ಯರನ್ನು ಸಭೆಗೆ ಪರಿಚಯಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕಳೆದ ಬಾರಿಯ ಅಂತಿಮ ಪದವಿ ಪರೀಕ್ಷೆಯಲ್ಲಿ ರಾಂಕ್ ವಿಜೇತ ವಿದ್ಯಾರ್ಥಿನಿಯರಾದ ಕು.ತೃಪ್ತಿ ನಾಯಕ್, ಕು.ಜೋಯ್ಲಿನ್, ಕು. ದೀಪ್ತಿ ವೆಲಂಕರ್ ಹಾಗೂ ಕು. ಅನಿಶಾ ಇವರನ್ನು ಸನ್ಮಾನಿಸಲಾಯಿತು ಮತ್ತು ಖೋ-ಖೋ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ ವಿದ್ಯಾರ್ಥಿನಿ ಕು. ಶ್ರಾವ್ಯ ಶೆಟ್ಟಿ ಇವರನ್ನು ಕ್ರೀಡಾ ಸಮವಸ್ತ್ರ ನೀಡಿ ಗೌರವಿಸಲಾಯಿತು ಹಾಗೂ ಡೆಂಗ್ಯೂ ಮತ್ತು ಪ್ಲಾಸ್ಟಿಕ್ ನಿರ್ಮೂಲನ ಕ್ರಮಗಳ ಬಗ್ಗೆ ಕರಪತ್ರವನ್ನು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ರೋಟರಿ ಜಿಲ್ಲೆ, 3182ರ 2023-24 ನೇ ಸಾಲಿನ ಜಿಲ್ಲಾ ರೋಟರಾಕ್ಟ್ ಸಭಾಪತಿ Rtn. MPHF ಸುಬ್ರಹ್ಮಣ್ಯ ಬಾಸ್ರಿ, 24-25 ನೇ ಸಾಲಿನ ಜಿಲ್ಲಾ ಸಭಾಪತಿ Rtn. PHF ನವೀನ್ ಅಮೀನ್, ವಲಯ-5 ರ ಸಹಾಯಕ ಗವರ್ನರ್ Rtn. ಅನಿಲ್ ಡೇಸಾ, ವಲಯ-5ರ ವಲಯ ಸೇನಾನಿ Rtn. ಸುರೇಶ್ ನಾಯಕ್, ರೋಟರಿ ಕ್ಲಬ್ ಕಾರ್ಕಳದ ಅಧ್ಯಕ್ಷರಾದ Rtn. ಇಕ್ಬಾಲ್ ಅಹಮದ್,ರೋಟರಾಕ್ಟ್ ಅಧ್ಯಕ್ಷರಾದ ಸುನಿಲ್ ನಾಯಕ್, ಸಭಾಪತಿಗಳಾದ Rtn. PHF ನಿರಂಜನ್ ಜೈನ್ , Rtn. ಶಶಿಕಲಾ ಹೆಗ್ಡೆ, ಜಿಲ್ಲಾ ರೋಟರಾಕ್ಟ್ ಕಾರ್ಯದರ್ಶಿ ಶಂಕರ್ ಕುಡ್ವ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 23-24 ನೇ ಸಾಲಿನ ಅಧ್ಯಕ್ಷರಾದ Rtr. ನಿಶ್ಚತ್ ಶೆಟ್ಟಿ ಸ್ವಾಗತಿಸಿ, Rtr. ಶಂಕರ್ ಕುಡ್ವ ವಂದಿಸಿ ಮಾಜಿ ಜಿಲ್ಲಾ ಪ್ರತಿನಿಧಿ Rtr. ಪ್ರಶಾಂತ ಆಚಾರ್ಯ ಇವರು ಕಾರ್ಯಕ್ರಮ ನಿರೂಪಿಸಿದರು.