
ಸೆ. 11ರಂದು ರಂದು ರೋಟರಿ ಕ್ಲಬ್ ಕಾರ್ಕಳ ಇವರ ಸಹಯೋಗದೊಂದಿಗೆ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಛೇರಿ ಕಾರ್ಕಳ ಇಲ್ಲಿಗೆ ಸುಮಾರು 50 ಲೀಟರ್ ಸಾಮರ್ಥ್ಯದ ಶುದ್ಧ ಕುಡಿಯುವ ನೀರಿನ ಘಟಕ (ವಾಟರ್ ಫಿಲ್ಟರ್) ವನ್ನು ರೋಟರಿ ಕ್ಲಬ್ ಅಧ್ಯಕ್ಷರು ರೋಟೇರಿಯನ್ ಇಕ್ಬಾಲ್ ಅಹಮದ್ ಅವರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ರೋ|ಗಣೇಶ್ ಸಾಲಿಯಾನ್, ರೋ| ಶಶಿಕಲಾ. ಕೆ. ಹೆಗ್ಡೆ.ರೋ |ಸೌಜನ್ಯ ಉಪಾಧ್ಯಾಯ, ರೋ| ರೇಖಾ ಉಪಾಧ್ಯಾಯ, ರೋ| ಶೈಲೇಂದ್ರ ರಾವ್, ರೋ| ಸಂದೀಪ್ ಜೈನ್, ರೋ| ಬಾಲಕೃಷ್ಣ ದೇವಾಡಿಗ, ರೋ ಚೇತನ್ ನಾಯಕ್, ಆನ್ ಶ್ರದ್ಧಾ ಸಂದೀಪ್ ಎಲ್ಲರೂ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಸಂತೋಷ್ ಕುಮಾರ್ ಅವರು ಇಲಾಖೆಯ ಪರವಾಗಿ ಅಭಿನಂದನೆ ಸಲ್ಲಿಸಿದರು. ಬಿ.ಐ.ಇ.ಆರ್.ಟಿ ಶ್ರೀಮತಿ ಜ್ಯೋತಿ ಅವರು ಸ್ವಾಗತಿಸಿ, ಸಿ.ಆರ್.ಪಿ ಶ್ರೀಮತಿ ಪ್ರೇಮಾ ಕುಮಾರಿ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುವುದರ ಮೂಲಕ ಶುಭ ಹಾರೈಸಲಾಯಿತು.













