
ಕಾರ್ಕಳ: ಬಸ್‌ನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ನಿಟ್ಟೆಯಲ್ಲಿ ನಡೆದಿದೆ,ಮಾಳ ಗ್ರಾಮದ ಹುಕ್ರಟ್ಟೆಯ 19 ವರ್ಷ ಪ್ರಾಯದ ಜನಿತ್ ಶೆಟ್ಟಿ ಎಂದು ತಿಳಿದು ಬಂದಿದೆ,ಮೃತ ವಿದ್ಯಾರ್ಥಿಯು ನಿಟ್ಟೆ ವಿದ್ಯಾಸಂಸ್ಥೆಯಲ್ಲಿ ದ್ವಿತೀಯ ಬಿ.ಎಸ್ಸಿ ವಿದ್ಯಾಭ್ಯಾಸ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.
ಕಾರ್ಕಳದಿಂದ ಬಸ್ಸಿನಲ್ಲಿ ಕಾಲೇಜಿಗೆ ಪ್ರಾಯಾಣಿಸುತ್ತಿರುವ ಸಂದರ್ಭ ಚಲಿಸುತ್ತಿದ್ದ ಬಸ್ಸಿನಿಂದ ಕೆಳಗೆ ಬಿದ್ದಿರುತ್ತಾನೆ,ಈ ವೇಳೆ ಆತನ ಮೈ ಮೇಲೆ ಬಸ್ಸಿನ ಹಿಂಬದಿಯ ಚಕ್ರ ಹರಿದಿದ್ದು ಗಾಯಗೊಂಡಿದ್ದ ಅವನನ್ನು ಕಾರ್ಕಳದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿಂದ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿ,ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುತ್ತಾನೆ. ಮೃತ ವಿದ್ಯಾರ್ಥಿ ತಾಯಿ ಮತ್ತು ತಂಗಿಯನ್ನು ಅಗಲಿದ್ದಾರೆ.













