
ಕಾರ್ಕಳ : ಕಾರ್ಕಳದ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಆರ್ಡರ್ ಶೀಟ್ ನಲ್ಲಿ ವಿನಾಕಾರಣವಾಗಿ 13 ಮಂದಿ ವಕೀಲರು ತಮ್ಮ ಸಹಿಯನ್ನು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳದ ಮಾನ್ಯ ಹಿರಿಯ ಸಿವಿಲ್ ನ್ಯಾಯಾದೀಶರಿಗೆ ವಿವರಣೆ ನೀಡುವಂತೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಕಾರ್ಕಳದ ಮಾನ್ಯ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಸಂಖ್ಯೆ RA 11/2016 ದಿನಾಂಕ 11- 02-2016 ರಂದು ಮೇಲ್ಮನವಿದಾರರಾದ ಚಂದ್ರಶೇಖರ್ ರಾವ್ ಮತ್ತು ಪ್ರತಿವಾದಿಗಳಾದ ಮೃತ ಗಿರಿಜಾ ಬಾಯಿ (ಮಕ್ಕಳಾದ ಶ್ರೀನಿವಾಸ, ಕೃಷ್ಣ ರಾವ್, ಪುರಷೋತ್ತಮ ಮತ್ತು ಮಗಳಾದ ಇಂದಾಣಿ) ಎರಡನೇ ಪ್ರತಿವಾದಿ ಯಶೋದಾ ಬೆಳಿರಾಯರ ನಡುವೆ ದಾಖಲು ಆಗಿರುತ್ತದೆ. ಮೇಲ್ಮನವಿದರ ಚಂದ್ರಶೇಖರ್ ರಾವ ರವರ ಪರವಾಗಿ ಮಗನಾದ ಜಿಪಿಎ ಹೋಲರ್ ರಾದ ರಾಘವೇಂದ್ರ ರಾವ್ ರವರು ವಾದವನ್ನು ಮಾಡುತ ಇದ್ದಾರೆ. ಪ್ರತಿವಾದಿಗಳಾದ ಮೃತ ಗಿರಿಜಾ ಬಾಯಿ ಪರವಾಗಿ ಎಂ ಕೆ ವಿಜಯ ಕುಮಾರ್ ಮತ್ತು ಅವರ ಮಗ ವಿಪುಲ್ ತೇಜ್ ಮತ್ತು ಎರಡನೇ ಪ್ರತಿವಾದಿ ಯಶೋದಾ ಬೆಳಿರಾಯರ ಪರವಾಗಿ ವಕೀಲರಾದ ಜಿ ಎಮ್ ಮುರಳೀದರ್ ಭಟ್ ರವರು ವಾದಿಸಿರುತ್ತಾರೆ.ಮೇಲ್ಮನವಿದಾರರಾದ ಚಂದ್ರಶೇಖರ್ ರಾವ್, ಅವರ ಹೆಂಡತಿ ರಾಗಿಣಿ ಸಿ ಎಸ್ ಅಲಿಯಾಸ್ ರಕ್ಷಿತಾ ಮತ್ತು ಮಗನಾದ ರಾಘವೇಂದ್ರ ರಾವ್ ರವರು ಕಾರ್ಕಳದ ವಕೀಲರ ಸಂಘದಲ್ಲಿರುವ ಕೆಲವು ವಕೀಲರ ವಿರುದ್ಧ ವೃತ್ತಿ ಧರ್ಮಕ್ಕೆ ವಿರುದ್ಧವಾಗಿ ವ್ಯವಹಾರ/ವರ್ತಿಸುತ್ತಿರುವ ಬಗ್ಗೆ ಕಾರ್ಕಳ ವಕೀಲರ ಸಂಘದ ಅಧ್ಯಕ್ಷರು, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರು ಮತ್ತು ಮಾನ್ಯ ನ್ಯಾಯಾಧೀಶರಿಗೆ ದೂರನ್ನು ನೀಡಿರುತ್ತಾರೆ.ದಿನಾಂಕ 25-07-2023 ರಂದು ಈ ಬಗ್ಗೆ ಕಾರ್ಕಳ ವಕೀಲರ ಸಂಘದ ಅಧ್ಯಕ್ಷರು ಕಾರ್ಕಳ ಪೊಲೀಸ್ ಉಪಾದಿಕ್ಷಕರಿಗೆ ದೂರನ್ನು ನೀಡಿರುತ್ತಾರೆ ಮತ್ತು ಪೊಲೀಸ್ ಉಪಾದಿಕ್ಷಕರು ಅವರ ದೂರನ್ನು ತಿರಸ್ಕಾರ ಮಾಡಿರುತ್ತಾರೆ. ಈ ಎಲ್ಲ ವಿಚಾರಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕಾರ್ಕಳ ದ ಕೆಲವು ವಕೀಲರು ದಿನಾಂಕ 11- Sep-2023 ರಂದು ಮಾನ್ಯ ನ್ಯಾಯಾಲಯದಲ್ಲಿ ಜಿಪಿ ಎ ದಾರರಾದ ರಾಘವೇಂದ್ರ ರಾವ್ ರವರ ಮೇಲೆ ಹಲ್ಲೆ ನಡೆಸಿ ಆರ್ಡರ್ ಶೀಟ್ ಮೇಲೆ ಅನಾವಶ್ಯಕವಾಗಿ 13 ವಕೀಲರು ಸಹಿ ಮಾಡಿರುತ್ತಾರೆ. ಆರ್ಡರ್ ಶೀಟ್ ಮೇಲೆ ಸಹಿ ಮಾಡಲು ಮಾನ್ಯ ನ್ಯಾಯಾಧೀಶರಿಗೆ ಮಾತ್ರ ಅವಕಾಶವಿರುತ್ತದೆ. ಈ ಹಿನ್ನಲೆಯಲ್ಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ಚಂದ್ರಶೇಖರ್ ರಾವ್ ರವರ ಪರವಾಗಿ ಖ್ಯಾತ ನ್ಯಾಯವಾದಿಗಳಾದ ವಿ. ಕೆ ಶ್ರೀಕಾಂತರವರು ವಾದವನ್ನು ಮಂಡಿಸಿರುತ್ತಾರೆ