
ಕಾರ್ಕಳ: ಜನವರಿ 16ರ ಬೆಳಗಿನ ಜಾವ ಮುಡಾರು ಗ್ರಾಮದ ಬಜಗೋಳಿಯಲ್ಲಿನ ಸುಮಾ ಕಾಂಪ್ಲೆಕ್ಸ್ ನಲ್ಲಿರುವ ಬಂಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ ಘಟನೆ ನಡೆದಿದೆ.
ಮರುದಿನ ಬೆಳಗ್ಗೆ ಸೊಸೈಟಿಯ ಸಿಬ್ಬಂದಿಗಳು ಕಚೇರಿ ತೆರೆಯಲು ಹೋದಾಗ ಕಳ್ಳತನ ನಡೆದಿರುವ ವಿಚಾರ ಬೆಳಕಿಗೆ ಬಂದಿದ್ದು ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



















