24.9 C
Udupi
Saturday, March 22, 2025
spot_img
spot_img
HomeBlogಕಾರ್ಕಳ:ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ

ಕಾರ್ಕಳ:ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ

ಉಡುಪಿ ಜಿಲ್ಲೆಯಲ್ಲಿ ಸರಕಾರಿ ತಾಂತ್ರಿಕ ಮತ್ತು ವೈದ್ಯಕೀಯ ಕಾಲೇಜು ಸ್ಥಾಪಿಸುವಂತೆ ಮನವಿ, ತಪ್ಪಿದ್ದಲ್ಲಿ ಬೃಹತ್ ಪ್ರತಿಭಟನೆಯ ಎಚ್ಚರಿಕೆ

ಉಡುಪಿ ಜಿಲ್ಲೆಗೆ ಸರಕಾರಿ ತಾಂತ್ರಿಕ ಮತ್ತು ವೈದ್ಯಕೀಯ ಕಾಲೇಜು ಸ್ಥಾಪಿಸುವಂತೆ ಆಗ್ರಹಿಸಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಕಳ ತಾಲೂಕು ವತಿಯಿಂದ ಮನವಿ ಸಲ್ಲಿಸಲಾಯಿತು.

ಬುದ್ದಿವಂತರ ಜಿಲ್ಲೆಯೆಂದೇ ಕರೆಯಲ್ಪಡುವ, ಶಿಕ್ಷಣ ಕಾಶಿಯಾಗಿರುವ, ಐತಿಹಾಸಿಕವಾಗಿ ಜ್ಞಾನ ಪರಂಪರೆಯನ್ನು ವೈಭವಕ್ಕೇರಿಸಿದ ಶ್ರೀಕೃಷ್ಣನ ನೆಲೆವೀಡಾದ ಉಡುಪಿ ಜಿಲ್ಲೆಯಲ್ಲಿ ಒಂದು ಸರಕಾರಿ ತಾಂತ್ರಿಕ ಕಾಲೇಜು ಮತ್ತು ವೈದ್ಯಕೀಯ ಕಾಲೇಜು ಇಲ್ಲದೇ ಇರುವುದು ಬಹಳ ಆಶ್ಚರ್ಯಕರ ಹಾಗೂ ದುಃಖದಾಯಕ ವಿಷಯವಾಗಿದೆ. ಉಡುಪಿ ಜಿಲ್ಲೆಯಲ್ಲಿ ಪ್ರತೀ ವರ್ಷ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು CET ಮತ್ತು NEET ಪರೀಕ್ಷೆಯನ್ನು ಬರೆದು, ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣದ ಅಪೇಕ್ಷಿಯಾಗಿರುತ್ತಾರೆ.

ಎಲ್ಲಾ ದಿಸೆಯಿಂದ ಪ್ರತಿಯೊಂದು ವ್ಯವಸ್ಥೆಯನ್ನು ಹೊಂದಿರುವ ಜಿಲ್ಲೆಯ ಜನತೆ ಸಾಮಾನ್ಯವಾಗಿ ಹೊರ ಜಿಲ್ಲೆಗಳಿಗೆ ತಮ್ಮ ಮಕ್ಕಳನ್ನು ಶಿಕ್ಷಣಕ್ಕಾಗಿ ಕಳುಹಿಸುವುದಾಗಲಿ ಅಥವಾ ಪ್ರೋತ್ಸಾಹಿಸುವುದು. ತುಲನಾತ್ಮಕವಾಗಿ ಕಡಿಮೆಯಾಗಿರುತ್ತದೆ. ಈ ಕಾರಣಗಳಿಂದ ಅದೆಷ್ಟೋ ಬಡ ಪ್ರತಿಭಾವಂತ ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣವನ್ನು ಪಡೆಯಬೇಕೆಂದು ಅಪೇಕ್ಷೆ ಹೊಂದಿರುವ ವಿದ್ಯಾರ್ಥಿ ತಾವು ಇಚ್ಚಿಸಿರುವ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಮತ್ತು ಇದರಿಂದಾಗಿ ಜಿಲ್ಲೆಯಲ್ಲಿನ ಪ್ರತಿಭೆಗೆ ಸರಿಯಾದ ವೇದಿಕೆ ಒದಗಿಸುವಲ್ಲಿ ಸರಕಾರ ವಿಫಲವಾಗುತ್ತಿದೆ ಎನ್ನುವುದು ಬಹಳ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಅನೇಕ ವರ್ಷಗಳಿಂದ ಎಬಿವಿಪಿ ಈ ವಿಚಾರವಾಗಿ ಸಂಬಂಧಪಟ್ಟ ಇಲಾಖೆಗೆ ಆಗ್ರಹವನ್ನು ಇರಿಸುತ್ತ ಬಂದಿದೆ ಕಳೆದ ಸರಕಾರ ಇದ್ದಂತಹ ಸಂದರ್ಭದಲ್ಲಿ ಅಂದಿನ ವೈದ್ಯಕೀಯ ಸಚಿವ ಡಾ| ಸುಧಾಕರ್ ಅವರು ಎಬಿವಿಪಿ ಮನವಿಗೆ ಸ್ಪಂದಿಸಿ ಪೂರಕವಾಗಿ ಸರಕಾರದಿಂದ ಉಳ್ಳೂರು ಭಾಗದಲ್ಲಿ ವೈದ್ಯಕೀಯ ಕಾಲೇಜು ನಿರ್ಮಿಸಲು 30 ಎಕರೆ ಜಮೀನನ್ನು ಮಂಜೂರಾತಿ ಮಾಡುವುದಾಗಿ ಭರವಸೆಯನ್ನು ನೀಡಿದ್ದರು ಆದರೆ ಇದುವರೆಗೆ ಆ ವಿಷಯವಾಗಿ ಯಾವುದೇ ರೀತಿಯ ಬೆಳವಣಿಗೆ ಆಗದೆ ಇರುವುದು ಬಹಳ ಖಂಡನಾರ್ಹ ವಿಷಯವಾಗಿದೆ. ಈಗಾಗಲೇ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಇಂತಹ ಕಾಲೇಜು ಇದ್ದು ಉಡುಪಿಯ ವಿದ್ಯಾರ್ಥಿಗಳಿಗಾಗಿ ಸರಕಾರ ಶೀಘ್ರವಾಗಿ ಮುಂದೆ ಬರುವ ಅಧಿವೇಶನದ ಸಂದರ್ಭದಲ್ಲಿ ಈ ವಿಷಯದ ಕುರಿತು ಸೂಕ್ತ ಜಮೀನಿನ ವ್ಯವಸ್ಥೆ ಹಾಗೂ ಹಣಕಾಸಿನ ಬಿಡುಗಡೆಯನ್ನು ಮಾಡಬೇಕು ಎಂದು ಎಬಿವಿಪಿ ಆಗ್ರಹಿಸುತ್ತದೆ ಒಂದು ವೇಳೆ ತಪ್ಪಿದ್ದಲ್ಲಿ ಮುಂದೆ * ಬರುವಂತಹ ದಿನಗಳಲ್ಲಿ ಜಿಲ್ಲೆಯಾದ್ಯಂತ ಬೃಹತ್ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸುತ್ತೇವೆ ಎಂದು ಮನವಿ ನೀಡಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಸಂಚಾಲಕರಾದ ಶ್ರೇಯಸ್ ಅಂಚನ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಪವನ್ ಕುಲಾಲ್, ತಾಲೂಕು ವಿದ್ಯಾರ್ಥಿನಿ ಪ್ರಮುಖ್ ಸೌಮ್ಯ ಜಿ ನಾಯಕ್, ತಾಲೂಕು ಸಹ ವಿದ್ಯಾರ್ಥಿನಿ ಪ್ರಮುಖ್ ಮನ್ವಿತಾ ಕುಲಾಲ್, ನಗರ ಸಹ ಕಾರ್ಯದರ್ಶಿ ಯಾದ ದೀಕ್ಷಿತ್ ಹಾಗೂ ಪ್ರಮುಖ ಕಾರ್ಯಕರ್ತರಾದ ಮನೋಜ್,ವಿಜೇಂದ್ರ, ಯುವರಾಜ್, ಸುದೀಪ್, ತನುಶ್ರೀ, ಪ್ರಜ್ವಲ್, ಶಿವಪ್ರಸಾದ್,ಶ್ರೀಧರ್, ಮನ್ವಿತ್, ಶಿವಾನಂದ ರವರು ಉಪಸ್ಥಿತರಿದ್ದರು.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page