24.9 C
Udupi
Saturday, March 22, 2025
spot_img
spot_img
HomeBlogಕಳೆದುಹೋದ ಕಾರ್ಕಳದ ಮಾಣಿಕ್ಯ ಭಂಡಾರ್ಲು

ಕಳೆದುಹೋದ ಕಾರ್ಕಳದ ಮಾಣಿಕ್ಯ ಭಂಡಾರ್ಲು

✍️ ಸತೀಶ್ ಕಾತ್ಯಾಯಿನಿ ಕಾರ್ಕಳ

ಕಾರ್ಕಳದ ಮಾಜಿ ಶಾಸಕರು ಸಜ್ಜನ ರಾಜಕಾರಣಿ ದಿವಂಗತ ಗೋಪಾಲ ಭಂಡಾರಿಯವರ ಪುಣ್ಯ ತಿಥಿ ಇಂದು. ಬೆಂಗಳೂರಿಗೆ ಹೋಗಿ ಊರಿಗೆ ಮರಳಿ ಬರುತ್ತಿದ್ದ ಭಂಡಾರಿಯವರು ಊರಿಗೆ ಮರಳಿ ಬರಲಿಲ್ಲ, ಮನೆಗೆ ಬರಲಿಲ್ಲ ಅವರು ಮರಳಿ ಮಣ್ಣಿಗೆ ಅನ್ನುವ ಹಾಗೆ ಇಹಲೋಕವನ್ನು ತ್ಯಜಿಸಿದ್ದರು.
ಇವರ ಮರಣದ ಸುದ್ದಿ ಕೇಳಿ ಅಬಾಲ ವೃದ್ಧರು ಮರುಗಿದ್ದರು. ಕಾರ್ಕಳದ ಜನತೆಯ ಜೊತೆ ಜೊತೆಗೆ ಊರ ಪರವೂರ ಇವರ ಅಭಿಮಾನಿಗಳು ಕಂಬನಿ ಸುರಿಸಿದ್ದರು, ತಮ್ಮ ಊರಿನ ನಾಯಕನನ್ನು ಕಳೆದುಕೊಂಡ ಕಾರ್ಕಳ ಶೋಕ ಸಾಗರದಲ್ಲಿ ಮುಳುಗಿತ್ತು ಆ ದಿನದಂದು.
ನಮ್ಮ ಹುಟ್ಟಿನ ಅರಿವು ನಮಗೆ ಇರುವುದಿಲ್ಲ ಅನ್ನುವುದರಲ್ಲಿ ಎಷ್ಟು ಸತ್ಯಾಂಶ ಇದೆಯೋ ಹೀಗೆ ನಮ್ಮ ಸಾವಿನ ಬಗ್ಗೆ ನಮಗೆ ಅರಿವು ಇಲ್ಲ ಅನ್ನುವುದು ಕೂಡ ಅಷ್ಟೇ ಸತ್ಯ. ಶಾಸಕ ಆಗಬೇಕು ಅನ್ನುವ ಕನಸನ್ನು ಕಾಣದಿದ್ದ ದಿವಂಗತ ಗೋಪಾಲ ಭಂಡಾರಿಯವರು ಶಾಸಕರಾಗಿದ್ದೆ ಒಂದು ದೊಡ್ಡ ವಿಷಯ.
ಜೀವನದಲ್ಲಿ ಏರಿಳಿತ ಇರುವ ಹಾಗೆ ರಾಜಕೀಯದಲ್ಲಿ ಸೋಲು ಗೆಲುವು ಅನ್ನುವುದು ಒಂದೇ ನಾಣ್ಯದ ಎರಡು ಮುಖಗಳು ಇದ್ದ ಹಾಗೆ ಹೀಗೆ ಭಂಡಾರಿಯವರು ಗೆಲುವಿನ ರುಚಿಯನ್ನು ಉಂಡ ವ್ಯಕ್ತಿ ಜೊತೆಗೆ ಸೋಲಿನ ಕಹಿ ಅನುಭವವನ್ನು ಕೂಡ ಅರಿತವರು. ಗೆದ್ದಾಗ ಹಿಗ್ಗಿ ಸೋತಾಗ ಕುಗ್ಗಿ ಸುಮ್ಮನೆ ಇರುವ ಜಾಯಾಮಾನದವರಲ್ಲ ಇವರು. ಇವರು ಬಾಳಿ ಬದುಕಿದ್ದರೆ ಇವರ ರಾಜಕೀಯ ಜೀವನದಲ್ಲಿ ಯಾವುದಾದರೂ ಒಂದು ರೀತಿಯಲ್ಲಿ ತಿರುವು ಕಾಣುವ ಅವಕಾಶಗಳು ಕೂಡ ಇತ್ತು ಆದರೆ ವಿಧಿಲಿಖಿತ ಬೇರೆ ಆಗಿತ್ತು ಇವರ ಬದುಕಿನ ಜೊತೆಗೆ ರಾಜಕೀಯ ಜೀವನ ಅಂತ್ಯ ಕಂಡು ಕಾರ್ಕಳದ ಭಂಡಾರ್ಲು ಇನ್ನಿಲ್ಲ ಅನ್ನುವ ಹಾಗೆ ಆಯ್ತು.


ದ್ವೇಷಿಸುವ ಜನರ ಮಧ್ಯೆ ಪ್ರೀತಿಸುವ ಜನರು ಕೂಡ ಇದ್ದಾರೆ ಅನ್ನುವುದಕ್ಕೆ ಇವರು ಅಗಲಿದ ದಿನದಂದು ಇವರ ಅಂತಿಮ ದರ್ಶನಕ್ಕೆ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಜನಗಳು ಸಾಕ್ಷಿ. ವ್ಯಕ್ತಿ ಇಲ್ಲ ಅನ್ನುವುದರಲ್ಲಿ ನೈಜತೆ ಇದೆ ಆದರೆ ಅವರ ವಿಚಾರಧಾರೆಗಳು ಅವರ ವ್ಯಕ್ತಿತ್ವಗಳು ಉಳಿಯುವುದಿಲ್ಲ ಅನ್ನುವುದರಲ್ಲಿ ನೈಜತೆ ಇಲ್ಲ ಯಾಕೆಂದರೆ ಅವರು ಅಳಿದರು ಕೂಡ ಅವರೊಂದಿಗೆ ಒಡನಾಟ ಇದ್ದವರು ಹಾಗೂ ಕಾರ್ಕಳದ ಅಭಿಮಾನಿಗಳಿಗೆ ಅವರ ನೆನಪು ಖಂಡಿತವಾಗಿಯೂ ಇರುತ್ತದೆ.
ನಮ್ಮ ಹುಟ್ಟು ನಮ್ಮ ಕೈಯಲ್ಲಿ ಇಲ್ಲ, ನಮ್ಮ ಸಾವು ನಮ್ಮ ಕೈಯಲ್ಲಿ ಇಲ್ಲ ಅನ್ನುವುದಕ್ಕೆ ಇವರ ಸಾವು ಅದಕ್ಕೊಂದು ಸಾಕ್ಷಿ ಅನ್ನಬಹುದು.. ಅಗಲಿದವರ ನೆನಪಿನೊಂದಿಗೆ ಅವರ ಆತ್ಮಕ್ಕೆ ಚಿರಶಾಂತಿಯನ್ನು ಆ ಭಗವಂತ ಕರುಣಿಸಲಿ ಅನ್ನುವ ಕೋರಿಕೆ.

ಬರಹ: ✍️ಸತೀಶ್ ಕಾತ್ಯಾಯಿನಿ ಕಾರ್ಕಳ

ದಿ.ಹೆಚ್ ಗೋಪಾಲ ಭಂಡಾರಿಯವರ ಭಾವಚಿತ್ರ

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page