
ಯೋಗಭ್ಯಾಸವು ಮಾನವನ ಮನಸ್ಸಿನ ಸ್ವಾಸ್ಥ್ಯ ಚಿಂತನೆ ಮತ್ತು ಆರೋಗ್ಯಕ್ಕೆ ಪೂರಕವಾದದು. ದೈಹಿಕ
ವ್ಯಾಯಾಮದೊಂದಿಗೆ ಏಕಾಗ್ರತೆ ಸಾಧಿಸಲು ಯೋಗ ಸಹಕಾರಿ. ಭಾರತೀಯ ಯೋಗ ಪರಂಪರೆ ಇಡೀ ಪ್ರಪಂಚದಲ್ಲಿ ಮನ್ನಣೆ ಗಳಿಸಿದ್ದು ಇಂದು ಜಗತ್ತಿನ ಬಹುತೇಕ ಎಲ್ಲಾ ರಾಷ್ಟ್ರಗಳೂ ಯೋಗ ಆಚರಣೆಯಲ್ಲಿ ತೊಡಗಿವೆ. ಇದು ಭಾರತ ಪ್ರಪಂಚಕ್ಕೆ ನೀಡಿರುವ ಅಮೂಲ್ಯ ಕೊಡುಗೆ ಎಂದು ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಮಹೇಶ್ ತಿಳಿಸಿದರು.
ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ತ್ರಿಶಾ ಪದವಿ ಪೂರ್ವ ಕಾಲೇಜಿನಲ್ಲಿ “ಯೋಗ
ದಿನಾಚರಣೆ”ಯಲ್ಲಿ ಪಾಲ್ಗೊಂಡು ಮಾತನಾಡಿದರು ಯೋಗ ಪಟು ಧನುಷ್ ಕೆ ಸೇನಾನಿ ಮಾರ್ಗದರ್ಶನದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಯೋಗ ಸಾಧನೆಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ಅಧಿಕಾರಿ ಜಯಪ್ರಕಾಶ್ ಶೆಟ್ಟಿ, ಅರುಣ್, ಜಿತೇಶ್, ಗುರುಪ್ರಸಾದ್, ರುದ್ರೇಗೌಡ, ಭವ್ಯ, ಸುಷ್ಮಾ, ಸಹನಾ, ಉಪಸ್ಥಿತರಿದ್ದು ಸಹಕರಿಸಿದರು.