ಕಾರ್ಕಳ ವಿಜೇತ ವಿಶೇಷ ಶಾಲೆಗೆ ಪ್ರಥಮ ಸ್ಥಾನದ ಪ್ರಶಸ್ತಿ ಹಾಗೂ ನಗದು ಬಹುಮಾನ

ಆಟಿಸಮ್ ಸೊಸೈಟಿ ಉಡುಪಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವಿಕಲಚೇತನರ ಸಬಲೀಕರಣ ಇಲಾಖೆ ಡಾ. ಎ. ವಿ. ಬಾಳಿಗ ಆಸ್ಪತ್ರೆ ಕಮಲ್ ಎ ಬಾಳಿಗ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ನಾರಾಯಣ ಗುರು ಸಭಾ ಭವನ ಉಡುಪಿಯಲ್ಲಿ ನಡೆದ ಕಲಾ ಸೌರಭ 2024 ಕಾರ್ಯಕ್ರಮ ದಲ್ಲಿ ಕಾರ್ಕಳ ಅಯ್ಯಪ್ಪನಗರ ವಿಜೇತ ವಿಶೇಷ ಶಾಲಾ ಮಕ್ಕಳು ಅತ್ಯುತ್ತಮ ಪ್ರದರ್ಶನವನ್ನು ನೀಡಿ ಪ್ರಥಮ ಸ್ಥಾನದ ಪ್ರಶಸ್ತಿ ಹಾಗೂ ನಗದು ಬಹುಮಾನ ರೂ. 11,111/-ಗಳನ್ನು ಮುಡಿಗೇರಿಸಿ ಕೊಂಡರು.
ವಿಜೇತರಿಗೆ ಹಾಗೂ ತರಬೇತುದಾರರಿಗೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದ ವತಿಯಿಂದ ತುಂಬು ಹೃದಯದ ಅಭಿನಂದನೆಯನ್ನು ತಿಳಿಸಲಾಗಿದೆ.