
ಶಿವಮೊಗ್ಗ: ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ದಾವಣಗೆರೆಯಲ್ಲಿ ನಡೆದ ಆದಿಲ್ ಸಾವು ಪ್ರಕರಣದ ಕುರಿತು ಮಾತನಾಡಿದ್ದು ಈ ಪ್ರಕರಣದಲ್ಲಿ ಪೊಲೀಸ್ ಠಾಣೆ ಮೇಲೆಯೇ ದಾಳಿ ಮಾಡಲಾಗಿದೆ. ಪೊಲೀಸ್ ಠಾಣೆಗಳಿಗೆ ರಕ್ಷಣೆ ಕೊಡಬೇಕಿದೆ. ರಾಜ್ಯ ಸರಕಾರ ಮುಸ್ಲಿಮರ ಪರವಾಗಿದೆ. ಅದಕ್ಕಾಗೇ ಈ ಸ್ಥಿತಿ ಸೃಷ್ಟಿಯಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ.
ಇನ್ನು ಮಂಗಳೂರಿನಲ್ಲಿ ರಸ್ತೆ ಮೇಲೆ ನಮಾಜ್ ಮಾಡಿದ್ದಕ್ಕೆ ಸುಮೋಟೊ ಕೇಸ್ ಹಾಕಿದ್ದ ಇನ್ಸ್ ಪೆಕ್ಟರ್ ಗೆ ಕಡ್ಡಾಯ ರಜೆ ಮೇಲೆ ಕಳುಹಿಸಲಾಯಿತು. ಸರಕಾರದ ಈ ನಿರ್ಧಾರ ರಸ್ತೆಯ ಮೇಲೆಯೇ ನಮಾಜ್ ಮಾಡುವುದಕ್ಕೆ ಲೈಸೆನ್ಸ್ ಕೊಟ್ಟಂತಿದೆ. ಪ್ರಾಮಾಣಿಕ ಅಧಿಕಾರಿ ಮೇಲೆಯೇ ಕ್ರಮಕೈಗೊಳ್ಳುವುದಾದರೆ ಯಾರು ಧೈರ್ಯದಿಂದ ಕೆಲಸ ಮಾಡಲು ಸಾಧ್ಯ? ಕಾಂಗ್ರೆಸ್ ಸರಕಾರ ಕರ್ನಾಟಕ ರಾಜ್ಯವನ್ನು ಮುಸ್ಲಿಂ ರಾಜ್ಯವೆಂದು ಘೋಷಣೆ ಮಾಡಲಿ ಎಂದು ವಾಗ್ದಾಳಿ ನಡೆಸಿದರು.