
ಕರಾವಳಿ ಭಜನಾ ಸಂಸ್ಕಾರ ವೇದಿಕೆ ಕಾರ್ಕಳ ತಾಲೂಕು ಘಟಕದ ಪ್ರಥಮ ಸಭೆಯು ಇಂದು ಕೇಂದ್ರ ಸಮಿತಿ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಮೂಡುಶೆಡ್ಡೆ ಇವರ ಅಧ್ಯಕ್ಷತೆಯಲ್ಲಿ, ಹಿರಿಯ ಭಜಕರಾದ ಕಮಲಾಕ್ಷ ನಾಯಕ್ ಜಾರ್ಕಳ ಇವರು ದೀಪ ಬೆಳಗಿಸುವುದರೊಂದಿಗೆ ಬಂಡಿಮಠದ ಶ್ರೀ ರಾಮ ಸಭಾಭವನದಲ್ಲಿ ನಡೆಯಿತು.
ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಪೂಜಾರಿ ಎರ್ಲಪಾಡಿಯವರು ಸ್ವಾಗತಿಸಿ ಸಂಘಟನೆಯ ಉದ್ದೇಶ ಮತ್ತು ಅಗತ್ಯತೆಯ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಸಂಘಟನೆಯ ಗೌರವಾಧ್ಯಕ್ಷರಾದ ರಮೇಶ್ ಕಲ್ಮಾಡಿಯವರು ಭಜನೆಯ ಮೂಲ ಸ್ವರೂಪದ ಬಗ್ಗೆ ಮಾಹಿತಿ ನೀಡಿದರು, ಸಂಘಟನೆಯ ಗೌರವ ಸಲಹೆಗಾರರಾದ ನರೇಶ್ ಕುಮಾರ್ ಸಸಿಹಿತ್ಲು ರವರು ಸಂಘಟನೆಯ ಬೈಲಾ ದ ಬಗ್ಗೆ ಮಾಹಿತಿ ನೀಡಿದರು
ಕರಾವಳಿ ಭಜನಾ ಸಂಸ್ಕಾರ ವೇದಿಕೆ ಕಾರ್ಕಳ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು,ಅಧ್ಯಕ್ಷರಾಗಿ ಗುರುಪ್ರಸಾದ್ ಶೆಟ್ಟಿ ಕಡಾರಿ,ಉಪಾಧ್ಯಕ್ಷರಾಗಿ ಶೋಭಾ ಭಾಸ್ಕರ್ ತಾರಾನಾಥ್ ಶೆಟ್ಟಿ ಕಾರ್ಯದರ್ಶಿಯಾಗಿ ಪ್ರನೀತ್ ಸಫಲಿಗ ಕಲ್ಯಾ, ಕೋಶಾಧಿಕಾರಿಯಾಗಿ ವೆಂಕಟೇಶ್ ಪೂಜಾರಿ ಸಚ್ಚೇರಿಪೇಟೆಯವರು ಆಯ್ಕೆಯಾದರು.
ವೇದಿಕೆಯಲ್ಲಿ ಕಾರ್ಕಳ ಭಜನಾ ಪರಿಷತ್ ಅಧ್ಯಕ್ಷರಾದ ಹರೀಶ್ ಹೆಗ್ಡೆ ಕಡ್ತಲ, ಕಾರ್ಯದರ್ಶಿ ಸುಕೇಶ್ ಸಾಣೂರು,ಕೋಶಾಧಿಕಾರಿ ಶ್ರೀಮತಿ ಸುಮಾ ಜಯಕರ್ ನಕ್ರೆ, ಭಜನಾ ಮಂಡಳಿಗಳ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ್ ಪ್ರಭು ಧನ್ಯವಾದ ನೀಡಿದರು, ಭಜನಾ ಮಂಡಳಿಗಳ ಒಕ್ಕೂಟ ಕಾರ್ಕಳ ತಾಲೂಕು ಅಧ್ಯಕ್ಷರಾದ ಶೈಲೇಶ್ ಸಾಣೂರು ಕಾರ್ಯಕ್ರಮ ನಿರೂಪಿಸಿದರು, ಭಜನಾ ಮಂಡಳಿಗಳ ಒಕ್ಕೂಟ ಕಾರ್ಯದರ್ಶಿ ಅಶೋಕ್ ಶೆಟ್ಟಿ ಮರ್ಣೆಯವರು ವೇದಿಕೆಯಲ್ಲಿದ್ದರು, ಈ ಸಂದರ್ಭದಲ್ಲಿ ಕಾರ್ಕಳ ತಾಲೂಕಿನ ಭಜನಾ ತರಭೇತುದಾರರು /ತೀರ್ಪುಗಾರರು /ಭಜನಾ ಸಂಘಟಕರು /ವಿವಿಧ ಭಜನಾ ಸಂಘಟನೆಯ ಪದಾಧಿಕಾರಿಗಳು ಹಾಗೂ ಸುಮಾರು ನೂರಕ್ಕೂ ಮಿಕ್ಕಿದ ಭಜಕರು ಉಪಸ್ಥಿತರಿದ್ದರು.