ಬೈಲೂರು ಬಸ್ ಸ್ಟ್ಯಾಂಡ್ ಸಿಸಿ ಕ್ಯಾಮೆರಾ ಅಳವಡಿಕೆಗೆ ಧನಸಹಾಯ

ಕರಕರಿ ಫ್ರೆಂಡ್ಸ್ ಸೇವಾ ಬಳಗ (ರಿ) ಕರ್ನಾಟಕ ಇದರ 90ನೇ ಸೇವಾ ಯೋಜನೆ ಒಂದಿಷ್ಟು ಸಮಾಜಕ್ಕಾಗಿ ವಿಚಾರದಡಿಯಲ್ಲಿ, ಬೈಲೂರು ಬಸ್ ಸ್ಟ್ಯಾಂಡ್ ಬಳಿ ಸಿಸಿ ಕ್ಯಾಮೆರಾ ಅಳವಡಿಕೆಗೆ ಧನಸಹಾಯ ನೀಡಲಾಗಿದೆ.
ಬೈಲೂರು ಕೆಳಗಿನ ಪೇಟೆ ಬಸ್ ಸ್ಟಾಂಡ್ ಹಾಗು ಆಸುಪಾಸಿನಲ್ಲಿ ಯಾವುದೇ ಒಂದು ಸಿಸಿ ಕ್ಯಾಮರಾವನ್ನು ಅಳವಡಿಸದೇ ಬಹಳಷ್ಟು ತೊಂದರೆಗಳು ಆಗುತ್ತಿದೆ,.ಬಹಳಷ್ಟು ಅಪಘಾತಗಳು ಆಗುತ್ತಿದ್ದು ರಾತ್ರಿ ಬೈಕ್ ಪಾರ್ಕಿಂಗ್ ಮಾಡಿ ಡ್ಯೂಟಿ ಹೋಗಿ ಬೆಳಿಗ್ಗೆ ಬರುವಾಗ ಪೆಟ್ರೋಲ್ ಕಳ್ಳತನ ಹಾಗು ಗೋ ಕಳ್ಳತನ ಕೂಡ ನಡೆಯುತ್ತಿದೆ, ಪಕ್ಕದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜ್ ಕೂಡ ಇರುವುದರಿಂದ ನೂರಾರು ಮಕ್ಕಳು ಆ ಕಡೆ ಈ ಕಡೆ ರಸ್ತೆ ದಾಟುತ್ತಾರೆ,
ಇಲ್ಲಿಯ ಈ ಸಮಸ್ಯೆಯನ್ನು ಪರಿಹರಿಸಲು ಸಿಸಿ ಕ್ಯಾಮರಾದ ಅಗತ್ಯ ಬಹಳವಿರುವುದರಿಂದ ಬೈಲೂರಿನ ರಿಕ್ಷಾ ಚಾಲಕರು ಹಾಗು ಮಾಲಕರು ನಮ್ಮ ಸಂಸ್ಥೆಯ ಅಧ್ಯಕ್ಷರಿಗೆ ಮನವಿಯನ್ನು ನೀಡಿರುತ್ತಾರೆ.
ಈ ಮನವಿಗೆ ಕೂಡಲೇ ಸ್ಪಂದಿಸಿ ಕರಕರಿ ಸಂಸ್ಥೆಯ ಸದಸ್ಯರಿಂದ ₹20,000/ ಸಾವಿರ ಮೊತ್ತವನ್ನು ಒಟ್ಟು ಮಾಡಿ ಬೈಲೂರು ಕೆಳಗಿನಪೇಟೆ ರಿಕ್ಷಾ ಚಾಲಕರು ಮತ್ತು ಮಾಲಕರಿಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀನಿವಾಸ್ ಪೂಜಾರಿ , ಸದಸ್ಯರಾದ ಸವಿನ್ ಪೂಜಾರಿ, ಪ್ರಸಾದ್ ಪೂಜಾರಿ ಮತ್ತು ಸುರೇಶ್ ಕುಮಾರ್ ಇವರ ಮುಖಾಂತರ ಮೊತ್ತವನ್ನು ನೀಡಲಾಯಿತು.