
ಪರ್ಯಾಯ ಶ್ರೀ ಪುತ್ತಿಗೆ ಮಠ,ಶ್ರೀ ಕೃಷ್ಣ ಮಠ ಉಡುಪಿ ಹಾಗೂ ಕಥಾ ಬಿಂದು ಪ್ರಕಾಶನ ಮಂಗಳೂರು ಆಶ್ರಯದಲ್ಲಿ ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ 50 ಕೃತಿಗಳ ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ಡಾ.ಸುಮತಿ ಪಿ. ಆಂಗ್ಲಭಾಷಾ ಉಪನ್ಯಾಸಕಿ ಸರಕಾರಿ ಪದವಿಪೂರ್ವ ಕಾಲೇಜು ಸಾಣೂರು. ಇವರ “ಚಿಗುರ ಸೊಬಗು,”ಹಾಗೂ “ಮೌನ ವೀಣೆ”ಕೃತಿಗಳನ್ನು ಕೃತಿಕಾರಳ ಗುರುಗಳಾದ ಎಸ್ ವಿ ಟಿ ಪದವಿಪೂರ್ವ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲೆ ಶ್ರೀಮತಿ ಶ್ಯಾಮಲಾ ಗೋಪಿನಾಥ್ ಹಾಗೂ ಎಸ್ ವಿ ಟಿ ಪದವಿ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲೆ ಪ್ರೊ.ಮಿತ್ರಪ್ರಭಾ ಹೆಗ್ಡೆ ಇವರುಗಳು ಕಥಾ ಬಿಂದು ಪ್ರಕಾಶನದ ಹದಿನೇಳನೇ ವಾರ್ಷಿಕೋತ್ಸದ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಗಣ್ಯರೊಡಗೂಡಿ ಲೋಕಾರ್ಪಣೆಗೊಳಿಸಿದರು.