
ನವದೆಹಲಿ: ಗುರುವಾರ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಗುರು ತೇಜ್ ಬಹದ್ದೂರ್ ನಗರದಲ್ಲಿ ಕಟ್ಟಡ ಕಾರ್ಮಿಕರನ್ನು ಭೇಟಿ ಮಾಡಿ ಅವರ ಸಮಸ್ಯೆ ಆಲಿಸಿ ನಂತರ ಕೆಲ ಕಾಲ ಅವರೊಂದಿಗೆ ಕಟ್ಟಡ ನಿರ್ಮಾಣ ಕೆಲಸದಲ್ಲಿ ಭಾಗಿಯಾಗಿದ್ದಾರೆ.
‘ಇಂದು ಭಾರತದಲ್ಲಿ ದೈಹಿಕ ಶ್ರಮವನ್ನು ಮಾಡುವ ಕಾರ್ಮಿಕರಿಗೆ ಗೌರವವಿಲ್ಲ, ಆದ್ದರಿಂದ ದೈಹಿಕವಾಗಿ ದುಡಿಮೆಯಲ್ಲಿ ತೊಡಗಿರುವ ಕಾರ್ಮಿಕರಿಗೆ ಸಂಪೂರ್ಣ ಹಕ್ಕುಗಳನ್ನು ಒದಗಿಸುವ ಮೂಲಕ ಗೌರವಿಸುವುದು ತಮ್ಮ ಜೀವನದ ಧ್ಯೇಯ’ ಎಂದು ರಾಹುಲ್ ಗಾಂಧಿ ತಮ್ಮ ವಾಟ್ಸಾಪ್ ಚಾನೆಲ್‌ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ.