24.9 C
Udupi
Friday, March 21, 2025
spot_img
spot_img
HomeBlogಕಂಚು ಇಲ್ಲದೆ,ಕಂಚಿನ ಪ್ರತಿಮೆ ಮಾಡಿದ ಶಾಸಕರಿಗೆ ಹಾಲಿಲ್ಲದ ಚಾ ಮಾಡುವುದು ದೊಡ್ಡ ವಿಷಯವಲ್ಲ

ಕಂಚು ಇಲ್ಲದೆ,ಕಂಚಿನ ಪ್ರತಿಮೆ ಮಾಡಿದ ಶಾಸಕರಿಗೆ ಹಾಲಿಲ್ಲದ ಚಾ ಮಾಡುವುದು ದೊಡ್ಡ ವಿಷಯವಲ್ಲ

ಹಾಲಿನ ದರ ಏರಿಕೆಯ ಪ್ರತಿಭಟನೆ ಅರ್ಥಹೀನ: ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದ ರಾವ್

ಹಾಲಿನ ಬೆಲೆ ಏರಿಕೆಯನ್ನು ನೆಪವಾಗಿಸಿಕೊಂಡು ಶಾಸಕ ಸುನೀಲ್ ಕುಮಾರ್ ಕಾರ್ಕಳದಲ್ಲಿ ಹಾಲಿಲ್ಲದ ಚಾಹ ಮಾಡುವ ಮೂಲಕ ಪ್ರತಿಭಟನೆಯನ್ನು ಮಾಡಿದ್ದಾರೆ ಶಾಸಕರಿಗೆ ಈ ರೀತಿ ಪ್ರತಿಭಟನೆ ಸಾಮಾನ್ಯವಾಗಬಹುದು ಯಾಕೆಂದರೆ ಕಂಚೇ ಇಲ್ಲದೆ ಕಂಚಿನ ಪ್ರತಿಮೆ ಮಾಡಿದ ಮಹಾನುಭಾವರಿಗೆ ಹಾಲಿಲ್ಲದ ಚಾಹ ಮಾಡುವುದು ಡೊಡ್ಡ ವಿಷಯವಾಗಲಿಕ್ಕಿಲ್ಲ ಎಂದು ಬ್ಲಾಕ್ ಕಾಂಗ್ರೇಸ್ ವಕ್ತಾರ ಪುರಸಭಾ ಸದಸ್ಯ ಶುಭದರಾವ್ ಲೇವಡಿ ಮಾಡಿದ್ದಾರೆ.

ರಾಜ್ಯದಲ್ಲಿ ಕಾಂಗ್ರೇಸ್ ಸರಕಾರದ ಅವದಿಯಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗಿ ರೈತರ ಆರ್ಥಿಕ ಬೆಳವಣಿಗೆಗೆ ಪೂರಕವಾಗಿದೆ, ಉತ್ಪಾದನೆಯಾದ ಹೆಚ್ಚುವರಿ ಹಾಲನ್ನು ಪ್ಯಾಕೆಟಿಗೆ 50 ಮಿ.ಲೀ ಸೇರಿಸಿ ಮಾರಾಟ ಮಾಡಲಾಗುತ್ತದೆ, ಆ ಹೆಚ್ಚುವರಿ ಹಾಲಿಗೆ ಎರಡು ರೂ ಹೆಚ್ಚುವರಿಯಾಗಿ ಪಡೆಯಲಾಗುತ್ತದೆಯೇ ವಿನಃ ಬೆಲೆ ಏರಿಸಿಲ್ಲ ಇದರಿಂದ ಹಾಲು ಉತ್ಪಾದಕರಿಗೆ ಲಾಭದಾಯಕವಾಗಿದೆ ವಿನಹ ಯಾರಿಗೂ ಹೊರೆಯಾಗಿಲ್ಲ, ಇದನ್ನು ರಾಜ್ಯದ ಮುಖ್ಯಮಂತ್ರಿಯೇ ಸ್ಪಷ್ಟಪಡಿಸಿದ್ದಾರೆ ಆದರೂ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ಅರ್ಥಹೀನ ಎಂದು ಹೇಳಿದ್ದಾರೆ.
ಹಾಲಿನ ಬೆಲೆಯನ್ನು ಇತರ ರಾಜ್ಯಗಳಿಗೆ ಹೋಲಿಸಿದರೆ ಪ್ರಧಾನ ಮಂತ್ರಿಗಳ ತವರು ಗುಜರಾತಿನಲ್ಲಿ ಅತೀ ಹೆಚ್ಚಾಗಿದೆ ಈ ಬಗ್ಗೆ ಬಿಜೆಪಿ ಪ್ರತಿಭಟನೆ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.


ಆಹಾರ ಕಿಟ್ಟ್ ನೀಡದೆ ಫಲಾನುಭವಿಗಳ ಪಟ್ಟಿ ಮಾಡುವುದು,
ಅನುದಾನ ಬಿಡುಗಡೆಯಾಗದೆ ಗುದ್ದಲಿ‌ ಪೂಜೆ ಮಾಡುವುದು,
ಕಾಮಗಾರಿ ಕಳಪೆಯಾದರೂ ಬಿಲ್ಲ್ ಪಾವತಿಸುವುದು. ಇದು ನಮ್ಮ ಶಾಸಕರ ವಿಶೇಷತೆ, ಈ ಬಾರಿ ಹಾಲಿಲ್ಲದ ಚಾಹ ಮಾಡುವುದು ಅದೇ ಪಟ್ಟಿಗೆ ಸೇರಿದೆ ಎಂದು ಬ್ಲಾಕ್ ಕಾಂಗ್ರೆಸ್ ವಕ್ತಾರ ಪುರಸಭಾ ಸದಸ್ಯ ಶುಭದರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page