
ಮುಂಬೈ: ಇತ್ತೀಚೆಗಷ್ಟೇ ವೈದ್ಯರೊಬ್ಬರು ಖರೀದಿಸಿದ ಐಸ್ ಕ್ರೀಮ್ ನಲ್ಲಿ ಮನುಷ್ಯನ ಬೆರಳು ಪತ್ತೆಯಾಗಿದ್ದು ಈ ವಿಚಾರ ಸಾಮಾಜಿಕ ವೈರಲ್ ಆಗಿತ್ತು.
ಈ ಹಿನ್ನಲೆ ಮಲಾಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಇದೀಗ ಐಸ್ ಕ್ರೀಮ್ ನಲ್ಲಿ ಪತ್ತೆಯಾದ ಬೆರಳು ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕನದ್ದು ಎಂಬ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇಂದಾಪುರ ಐಸ್ ಕ್ರೀಮ್ ಘಟಕದ ಓಂಕಾರ ಎಂಬ ಕಾರ್ಮಿಕನ ಬೆರಳು ಮೇ 11ರಂದು ಐಸ್ ಕ್ರೀಮ್ ಕಾರ್ಖಾನೆಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ, ಕತ್ತರಿಸಿ ಹೋಗಿದ್ದು ಅದು ಐಸ್ ಕ್ರೀಮ್ ಪ್ಯಾಕ್ ಮಾಡುವ ಸಂದರ್ಭದಲ್ಲಿ ಕೋನ್ ಒಳಗೆ ಸೇರಿ ಮಾರಾಟವಾಗಿದೆ ಎಂದು ತಿಳಿದುಬಂದಿದೆ. ದೂರು ದಾಖಲಾದ ಹಿನ್ನೆಲೆ ಡಿಎನ್ ಯ ಮಾದರಿ ಪರೀಕ್ಷೆ ನಡೆಸಿದ್ದು ಬೆರಳು ಅದೇ ಕಾರ್ಮಿಕನದು ಎಂದು ಖಚಿತಪಡಿಸಲಾಗಿದೆ.