
ಬೆಂಗಳೂರು: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್‍ವುಡ್ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಗ್ಯಾಂಗ ಬಂಧಿತರಾಗಿದ್ದು ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪವಿತ್ರಾ ಗೌಡಗೆ ಮೆಸೇಜ್ ಮಾಡ್ತಿದ್ದ ರಹಸ್ಯ ಬಯಲಾಗಿದೆ.
ಕಳೆದ 5 ತಿಂಗಳಿಂದ ಮೃತ ರೇಣುಕಾಸ್ವಾಮಿ ಪವಿತ್ರಾಗೆ ಮೆಸೇಜ್ ಮಾಡುತ್ತಿದ್ದು ಫೆಬ್ರವರಿಯಿಂದ ಸುಮಾರು 200ಕ್ಕೂ ಹೆಚ್ಚು ಮೆಸೇಜ್ ಬಂದಿದ್ದು, ಎಲ್ಲ ಮೆಸೇಜ್‍ಗಳು ಕೂಡ ಅಶ್ಲೀಲ ಮೆಸೇಜ್‍ಗಳಾಗಿವೆ ಎಂದು ವರದಿಯಾಗಿದೆ.
ಈ ಮೆಸೇಜ್ಗಳಿಗೆ ಪವಿತ್ರ ಗೌಡ್ರು ರಿಪ್ಲೈ ಮಾಡದೆ ಇದ್ದರಿಂದ ಕೋಪಗೊಂಡ ರೇಣುಕಾ ಸ್ವಾಮಿ ಅಶ್ಲೀಲ ಫೋಟೋ ಕೂಡ ಕಳುಹಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಪವಿತ್ರಾ ಗೌಡ ಈ ವಿಷಯವನ್ನು ಪವನ್‍ಗೆ ಹೇಳಿದ್ದು ಬಳಿಕ ಪವನ್, ಪವಿತ್ರಾ ಗೌಡ ರೀತಿ ಚಾಟ್ ಮಾಡಿದ್ದ. ರಿಪ್ಲೈ ಬಂದ ಖುಷಿಗೆ ರೇಣುಕಾಸ್ವಾಮಿ ಕೂಡ ಚಾಟ್ ಮಾಡ್ತಿದ್ದು ಹೀಗೆ ಮಾತಾಡ್ತಾ ಮಾತಾಡ್ತಾ ರೇಣುಕಾಸ್ವಾಮಿ ಬಳಿ ಪವನ್ ಪೋಟೋ ಕಳುಹಿಸುವಂತೆ ಹೇಳಿದ್ದಾರೆ. ಅಂತೆಯೇ ರೇಣುಕಾಸ್ವಾಮಿ ತನ್ನ ಫೋಟೋವನ್ನು ಕಳುಹಿಸಿದ್ದು ಈ ಫೋಟೋ ಮೂಲಕ ಡಿ ಗ್ಯಾಂಗ್ ಆಟ ಶುರುವಾಗಿ ರೇಣುಕಾಸ್ವಾಮಿ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ತನಿಖೆಯ ಮೂಲಕ ಬೆಳಕಿಗೆ ಬಂದಿದೆ