ತಂದೆಯೊಬ್ಬರ ಹೆಮ್ಮೆಯ ಕ್ಷಣದ ಚಿತ್ರ ವೈರಲ್, ಜನ ಮೆಚ್ಚುಗೆ

ಮಕ್ಕಳು ಉತ್ತಮ ಸಾಧನೆ ಮಾಡಿ ಎತ್ತರ ಸ್ಥಾನಕ್ಕೆ ಏರಬೇಕೆನ್ನುವುದು ಪ್ರತಿಯೊಬ್ಬ ತಂದೆ ತಾಯಿಯವರ ಕನಸಾಗಿರುತ್ತದೆ.
ತೆಲಂಗಾಣದಲ್ಲಿ ಮಗಳೊಬ್ಬಳು, ಉನ್ನತ ಅಧಿಕಾರಿಯಾಗಿ ಆಗಮಿಸಿ, ತಂದೆಯಿಂದಲೇ ಸೆಲ್ಯೂಟ್ ಹೊಡಿಸಿಕೊಂಡ ವಿಚಾರವೊಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿದೆ. ತೆಲಂಗಾಣ ಪೊಲೀಸ್ ಇಲಾಖೆಯಲ್ಲಿ ಉಪ ನಿರ್ದೇಶಕರಾಗಿ ಕೆಲಸ ಮಾಡುವ ರಾಜ್ ಬಹುದ್ದೂರ್ ವೆಂಕಟರಂಗ ರೆಡ್ಡಿ ಅವರ ಪುತ್ರಿ ಐಎಎಸ್ ಅಧಿಕಾರಿಯಾಗಿದ್ದು ಇತ್ತೀಚೆಗೆ ಕಾರ್ಯಕ್ರಮ ಒಂದಕ್ಕೆ ಆಗಮಿಸಿದ ವೇಳೆ, ತಂದೆಯೇ ಮಗಳಿಗೆ ಸೆಲ್ಯೂಟ್ ಹೊಡೆದು ಹೂಗುಚ್ಚ ನೀಡಿ ಆತ್ಮೀಯವಾಗಿ ಬರ ಮಾಡಿಕೊಂಡಿರುವ ಕ್ಷಣ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕರ್ನಾಟಕ ಸರಕಾರದ ಮಾಜಿ ಕಾರ್ಯದರ್ಶಿ ರತ್ನ ಪ್ರಭ ರವರು ಈ ಫೋಟೋವನ್ನು ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದು ಎಂತಹ ಅದ್ಭುತ ಕ್ಷಣ ಎಂದು ಬರೆದುಕೊಂಡಿದ್ದಾರೆ.