27.8 C
Udupi
Monday, August 10, 2026
spot_img
spot_img
HomeBlogಎಸ್.ವಿ.ಟಿ ಪೋಷಕರ ಸಭೆ ಮತ್ತು ಒತ್ತಡ ನಿರ್ವಹಣೆ ಮಾಹಿತಿ ಕಾರ್ಯಾಗಾರ

ಎಸ್.ವಿ.ಟಿ ಪೋಷಕರ ಸಭೆ ಮತ್ತು ಒತ್ತಡ ನಿರ್ವಹಣೆ ಮಾಹಿತಿ ಕಾರ್ಯಾಗಾರ

ಎಸ್.ವಿ.ಟಿ ಪದವಿ ಪೂರ್ವ ಕಾಲೇಜಿನ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಿದ್ಯಾರ್ಥಿಗಳ ಪೋಷಕರ ಸಭೆಯನ್ನು ನಡೆಸಲಾಯಿತು. ಮೊದಲ ರೂಪಣಾತ್ಮಕ ಪರೀಕ್ಷೆಯ ಅಂಕ ಪರಿಶೀಲನೆಯನ್ನು ಮಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿಲಾಯಿತು.


ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಎಸ್.ಡಿ.ಎಂ ಉಜಿರೆಯ ಬ್ಯಾಚುರಲ್ ಆಫ್ ನ್ಯಾಚುರೋಪತಿ ಅಂಡ್ ಯೋಗಿಕ್ ಸೈನ್ಸ್ (ಬಿ.ಎನ್.ವೈ.ಎಸ್) ವಿಭಾಗದ ಕು. ಶ್ರೇಯಾ ರವೀಂದ್ರ ಶೆಟ್ಟಿ ಬಜಗೋಳಿಯವರು ಒತ್ತಡ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಎಸ್.ವಿ. ಎಜುಕೇಶನ್ ಟ್ರಸ್ಟಿನ ಕಾರ್ಯದರ್ಶಿ ಕೆ.ಪಿ ಶೆಣೈ ಅವರು ಸ್ಫೂರ್ತಿದಾಯಕ ಮಾತುಗಳನ್ನಾಡಿದರು.
ಪ್ರೌಢಶಾಲೆಯ ಹಿರಿಯ ಸಹ ಶಿಕ್ಷಕರಾದ ಶ್ರೀ ಯೋಗೇಂದ್ರ ನಾಯಕ್ ಶಾಲೆಯ ಫಲಿತಾಂಶವನ್ನು ವಿಶ್ಲೇಷಿಸಿ , ಅತ್ಯುತ್ತಮ ಫಲಿತಾಂಶವನ್ನು ಪಡೆಯಲು ಪೋಷಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸಂಪೂರ್ಣ ಸಹಭಾಗಿತ್ವ ಅತ್ಯಗತ್ಯ ಎಂದರು.
ಕಾಲೇಜಿನ ಪ್ರಾಂಶುಪಾಲ ಶ್ರೀ ನೇಮಿರಾಜ ಶೆಟ್ಟಿ ಕೆ ಅವರು ಕಾಲೇಜು ವಿಭಾಗದ ಫಲಿತಾಂಶವನ್ನು ವಿಶ್ಲೇಷಿಸಿ, ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ, ಮುಂದಿನ ವರ್ಷದಿಂದ ಪದವಿಪೂರ್ವ ಹಾಗೂ ಪದವಿ ಕಾಲೇಜು ವಿಭಾಗದಲ್ಲಿ ಕೋ-ಎಜ್ಯುಕೇಶನ್ ನಡೆಯಲಿದೆ. ಸರಕಾರದ ಅನುಮತಿ ಈಗಾಗಲೇ ಬಂದಿದೆ ಎಂದರು.
ವಿದ್ಯಾರ್ಥಿಗಳ ಪೋಷಕರಾದ ಶ್ರೀಮತಿ ವಿದ್ಯಾ ಹೇಮನ ಗೌಡ ದಳವಾಯಿ, ಮಲ್ಲಿಕಾರ್ಜುನ ಕಣವಿ, ಶ್ರೀಮತಿ ಸುಮಿತ್ರಾ ಅನಿಲ್ ಹೆಗ್ಡೆ, ಶ್ರೀಮತಿ ಜ್ಯೋತಿ ಸೂರ್ಯಕಾಂತ್ ಪೂಜಾರಿಯವರು ತಮ್ಮ ಮಕ್ಕಳ ಕಲಿಕಾ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡು, ಶಾಲೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.


ಈ ಸಂದರ್ಭದಲ್ಲಿ ಕಾಲೇಜಿನ ಇಂಟರ್ಯಾಕ್ಟ್ ಕ್ಲಬ್ಬಿನ ಅಧ್ಯಕ್ಷೆ ಕು. ಪ್ರಣಮ್ಯ, ಕಾರ್ಯದರ್ಶಿ ಕು. ದೇವಿಕಾ ಹಾಗೂ ಉಪನ್ಯಾಸಕರು, ಅಧ್ಯಾಪಕರು, ವಿದ್ಯಾರ್ಥಿಗಳ ಪೋಷಕರು, ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ವಿ ಎಜ್ಯುಕೇಶನ್ ಟ್ರಸ್ಟಿನ ಉಪಾಧ್ಯಕ್ಷ ಕಾರ್ಕಳ ಕಮಲಾಕ್ಷ ಕಾಮತ್ ವಹಿಸಿ ಸ್ಫೂರ್ತಿದಾಯಕ ಮಾತುಗಳನ್ನಾಡಿ ಶುಭ ಹಾರೈಸಿದರು. ಲೆಕ್ಕಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಸುಮಂಗಲಾ ಪ್ರಭು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ವಿಜ್ಞಾನ ಶಿಕ್ಷಕಿ ಶ್ರೀಮತಿ ಪ್ರತೀಕ್ಷಾ ವಂದಿಸಿದರು. ಕನ್ನಡ ಭಾಷಾ ಅಧ್ಯಾಪಕ ದೇವದಾಸ್ ಕೆರೆಮನೆ ನಿರೂಪಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page