“ಜನ ವಿರೋಧಿ ಕಾಮಗಾರಿ ನಡೆಸಿ ಅನಾಹುತಗಳು ಸಂಭವಿಸಿದ್ದಲ್ಲಿ ಸರಕಾರವೇ ನೇರ ಹೊಣೆ”
-ನವೀನ್ ನಾಯಕ್,ಕ್ಷೇತ್ರಾಧ್ಯಕ್ಷರು ಬಿಜೆಪಿ ಕಾರ್ಕಳ ಮಂಡಲ

ಉಡುಪಿ, ದ.ಕ ಜಿಲ್ಲೆ ವ್ಯಾಪ್ತಿಯ ಎಲ್ಲೂರು ಗ್ರಾಮದಿಂದ ನಂದಿಕೂರು ಇನ್ನಾ ಮೂಡಬಿದಿರೆ ಜನವಸತಿ ಇರುವ ಮಾರ್ಗದಲ್ಲಿ ಸಾರ್ವಜನಿಕರ ವಿರೋಧದ ನಡುವೆ ಕೇರಳಕ್ಕೆ 400 ಕೆ.ವಿ ಹೈಟೆನ್ಷನ್ ವಿದ್ಯುತ್ ಹರಿಸುವ ಮಾರ್ಗಕ್ಕೆ ಬಲತ್ಕಾರವಾಗಿ ಗೋಪುರ ಅಳವಡಿಸುವ ಸರಕಾರದ ಕ್ರಮ ತೀರಾ ಖಂಡನೀಯ ಎಂದು ಬಿಜೆಪಿ ಕಾರ್ಕಳ ಮಂಡಲ ಕ್ಷೇತ್ರಾಧ್ಯಕ್ಷರಾದ ನವೀನ್ ನಾಯಕ್ ಹೇಳಿದ್ದಾರೆ.
ಸಾರ್ವಜನಿಕರ ವಿರೋಧದವಿದ್ದರೂ ಸರಕಾರ, ಜಿಲ್ಲಾಡಳಿತ ಬಲತ್ಕಾರವಾಗಿ ಈ ಮಾರ್ಗದಲ್ಲಿ ಗೋಪುರ ನಿರ್ಮಿಸಲು ಮುಂದಾಗಿದೆ. ಈ ಹಿಂದೆ ನಮ್ಮ ಬಿಜೆಪಿ ಸರಕಾರದ ಅವಧಿಯಲ್ಲಿ ಸಾರ್ವಜನಿಕರನ್ನು ಹಾಗೂ ಸ್ಥಳೀಯ ಸಮಸ್ಯೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಾಗೂ ಸ್ಥಳೀಯ ಸಮಸ್ಯೆಗಳಿಗೆ ಪರ್ಯಾಯ ಮಾರ್ಗಗಳನ್ನು ಕಂಡುಕೊಂಡು ಸಾರ್ವಜನಿಕರಿಗೆ ಹೆಚ್ಚಿನ ತೊಂದರೆ ಆಗದ ರೀತಿಯಲ್ಲಿ ಕಾಮಗಾರಿಯನ್ನು ನಡೆಸಲು ನಿರ್ಧರಿಸಿತ್ತು.
ಆದರೀಗ ಕಾಂಗ್ರೆಸ್ ಸರಕಾರ ಸ್ಥಳಿಯರ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಬಲತ್ಕಾರವಾಗಿ ಕಾಮಗಾರಿ ನಡೆಸಲು ಮುಂದಾಗಿದೆ. ಅಭಿವೃದ್ದಿ ಜನತೆಯ ಜೊತೆಗೆ ಕೊಂಡೊಯ್ಯಬೇಕೆ ಹೊರತು ನಾಗರಿಕರ ವಿರೋಧದವಿದ್ದಾಗ ಬಲವಂತದಿಂದ ನಡೆಸುವುದಲ್ಲ. ಸರಕಾರವು ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಒತ್ತಡ ಹಾಕಿ ಜನರ ವಿರೋಧ ಕಟ್ಟಿಕೊಂಡು ಕಾಮಗಾರಿ ನಡೆಸಲು ಮುಂದಾದಲ್ಲಿ ಮುಂದಾಗುವ ಅನಾಹುತಗಳಿಗೆ ಸರಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಬಿಜೆಪಿ ಕಾರ್ಕಳ ಮಂಡಲದ ಕ್ಷೇತ್ರಧ್ಯಕ್ಷರಾದ ನವೀನ್ ನಾಯಕ್ ಸರಕಾರವನ್ನು ಎಚ್ಚರಿಸಿದ್ದಾರೆ.