26.7 C
Udupi
Wednesday, July 29, 2026
spot_img
spot_img
HomeBlog'ಎನರ್ಜಿ ಡ್ರಿಂಕ್' ಲೇಬಲ್‌ಗೆ ಬ್ರೇಕ್: FSSAI ಹೊಸ ನಿರ್ದೇಶನ

‘ಎನರ್ಜಿ ಡ್ರಿಂಕ್’ ಲೇಬಲ್‌ಗೆ ಬ್ರೇಕ್: FSSAI ಹೊಸ ನಿರ್ದೇಶನ

ನವದೆಹಲಿ: ಪಾನೀಯಗಳ ಮೇಲೆ ‘ಎನರ್ಜಿ ಡ್ರಿಂಕ್’ ಎಂಬ ಲೇಬಲ್ ಬಳಸುವುದನ್ನು ಸ್ಥಗಿತಗೊಳಿಸುವಂತೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಪ್ರಮುಖ ಪಾನೀಯ ಕಂಪನಿಗಳಿಗೆ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಈ ಕ್ರಮದಿಂದ ಪೆಪ್ಸಿ, ರೆಡ್‌ಬುಲ್, ಮಾನ್‌ಸ್ಟರ್ ಬೇವರೇಜ್, ರಿಲಯನ್ಸ್ ಸೇರಿದಂತೆ ಹಲವು ಸಂಸ್ಥೆಗಳ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ.

ಈ ಪಾನೀಯಗಳಲ್ಲಿ ಹೆಚ್ಚಿನ ಪ್ರಮಾಣದ ಕೆಫಿನ್, ಸಕ್ಕರೆ ಮತ್ತು ಟೌರಿನ್ ಅಂಶಗಳಿದ್ದು, ಅವು ತಕ್ಷಣವೇ ಶಕ್ತಿ ಹಾಗೂ ಚೈತನ್ಯ ನೀಡುತ್ತವೆ ಎಂಬ ರೀತಿಯ ಪ್ರಚಾರ ಗ್ರಾಹಕರನ್ನು ತಪ್ಪು ದಾರಿಗೆಳೆಯುತ್ತದೆ ಎಂದು ಪ್ರಾಧಿಕಾರ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ಇಂತಹ ಜಾಹೀರಾತು ಹಾಗೂ ಲೇಬಲ್ ಬಳಕೆಯನ್ನು ನಿಲ್ಲಿಸುವಂತೆ ಕಂಪನಿಗಳಿಗೆ ನೋಟಿಸ್ ನೀಡಲಾಗಿದೆ.

ಈ ನಿರ್ದೇಶನದಿಂದ ‘ಶಕ್ತಿ ಪಾನೀಯ’ ಹೆಸರಿನಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಕಂಪನಿಗಳು ನಷ್ಟದ ಆತಂಕ ವ್ಯಕ್ತಪಡಿಸಿವೆ. ಆದರೆ ಉದ್ಯಮದ ಆಕ್ಷೇಪಗಳನ್ನು ತಿರಸ್ಕರಿಸಿರುವ ಪ್ರಾಧಿಕಾರ, ಲೇಬಲ್ ಬದಲಾವಣೆಗಾಗಿ 90 ದಿನಗಳ ಗಡುವು ನೀಡಿದ್ದು, ಅಗತ್ಯವಿದ್ದರೆ ನ್ಯಾಯಾಲಯದ ಮೊರೆ ಹೋಗಬಹುದು ಎಂದು ತಿಳಿಸಿದೆ.

2028ರ ವೇಳೆಗೆ ಭಾರತದ ಪಾನೀಯ ಉದ್ಯಮವು ₹15,350 ಕೋಟಿ ಮೌಲ್ಯ ತಲುಪುವ ನಿರೀಕ್ಷೆಯಿರುವ ಸಂದರ್ಭದಲ್ಲೇ ಈ ಆದೇಶ ಹೊರಬಿದ್ದಿದೆ. ಈ ಕುರಿತು ಸಂಬಂಧಿತ ಕಂಪನಿಗಳಿಗೆ ನಿರ್ದೇಶನ ತಲುಪಿದ್ದರೂ, ಯಾವುದೇ ಸಂಸ್ಥೆಯಿಂದ ಅಧಿಕೃತ ಪ್ರತಿಕ್ರಿಯೆ ಇನ್ನೂ ಪ್ರಕಟವಾಗಿಲ್ಲ. ಇಂತಹ ನಿಯಮಗಳನ್ನು ಹಲವು ದೇಶಗಳು ಈಗಾಗಲೇ ಜಾರಿಗೆ ತಂದಿವೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page