
ನವದೆಹಲಿ: ಮುಖ್ಯ ನ್ಯಾ| ಡಿ.ವೈ.ಚಂದ್ರಚೂಡ ಅವರ ತ್ರಿಸದಸ್ಯ ಪೀಠವು ‘ಋತುಚಕ್ರ ರಜೆಗೆ ನೀತಿ ರೂಪಿಸಲು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿ , ‘ಒಂದು ವೇಳೆ ನಾವು ಆದೇಶ ನೀಡಿದರೆ ಅದು ಮಹಿಳೆಯರ ಕೆಲಸದ ಮೇಲೆಯೇ ದುಷ್ಪರಿಣಾಮ ಬೀರಬಹುದು. ಉದ್ಯೋಗದಾತರು ಮಹಿಳೆಯರನ್ನು ನೇಮಿಸಲು ಹಿಂಜರಿಯಬಹುದು. ಹೀಗಾಗಿ ಇದು ಸರ್ಕಾರದ ನೀತಿಗೆ ಸಂಬಂಧಿಸಿದ ವಿಷಯ. ಸಂಬಂಧಿಸಿದ ಎಲ್ಲರ ಜತೆ ಸೇರಿ ಸರ್ಕಾರವೇ ನೀತಿ ರೂಪಿಸಬೇಕು’ ಎಂದು ಸ್ಪಷ್ಟಪಡಿಸಿದೆ.
ಇದಕ್ಕೆ ಅರ್ಜಿದಾರರು ಮಹಿಳೆಯರು ಇನ್ನಷ್ಟು ಕೆಲಸ ಮಾಡುವಂತಾಗಲು ಋತು ಚಕ್ರ ರಜೆ ಪ್ರೋತ್ಸಾಹಿಸುತ್ತದೆ ಎಂಬ ವಾದವನ್ನು ಮುಂದಿಟ್ಟಾಗ ಇದಕ್ಕೆ ಉತ್ತರಿಸಿದ ಪೀಠವು ‘ಅಂತಹ ರಜೆ ಕಡ್ಡಾಯ ಆದರೆ ಮಹಿಳೆಯರು ನೌಕರಿಯಿಂದ ದೂರ ಉಳಿದಂತಾಗುತ್ತದೆ’ ಎಂದು ಹೇಳಿದೆ.