
ಬಿಹಾರದ ಆರಾರಿಯ ಜಿಲ್ಲೆಯ ಬಕ್ರಾ ನದಿಗೆ ಅಡ್ಡಲಾಗಿ 12 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣಗೊಂಡಿದ್ದು, ಇನ್ನೇನು ಉದ್ಘಾಟನೆಯಾಗಬೇಕು ಎನ್ನುವಷ್ಟರಲ್ಲಿ ಸೇತುವೆ ಕುಸಿದು ಬಿದ್ದಿದೆ.
ಜಿಲ್ಲೆಯ ಕುರ್ಸಕಾಂತ್ ಹಾಗೂ ಸಿಕ್ತಿ ಎಂಬ ಎರಡು ಪ್ರದೇಶಗಳ ಮಧ್ಯೆ ಸಂಪರ್ಕಕ್ಕಾಗಿ ಸೇತುವೆ ನಿರ್ಮಾಣಗೊಂಡಿದ್ದು ಉದ್ಘಾಟನೆಯ ಮೊದಲನೆಯ ದಿನವೇ, ಸೇತುವೆ ನೀರಿನಲ್ಲಿ ಸಂಪೂರ್ಣ ಕೊಚ್ಚಿ ಹೋಗಿದ್ದು ಇದರ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ನಿರ್ಮಾಣ ಸಂಸ್ಥೆಯ ನಿರ್ಲಕ್ಷದಿಂದಾಗಿ ಸೇತುವೆ ಕುಸಿದಿದ್ದು , ಇದರ ವಿರುದ್ಧ ತನಿಖೆ ಕೈಗೊಳ್ಳುವಂತೆ ಎಂದು ಸಿಕ್ತಿ ಶಾಸಕ ಆಗ್ರಹಿಸಿದ್ದಾರೆ. ಸೇತುವೆ ಇರುವ ನದಿಯ ತೀರದಲ್ಲಿ ಇದ್ದ ಮಕ್ಕಳು ಈ ದೃಶ್ಯವನ್ನು ಸೆರೆಹಿಡಿದಿದ್ದು ಸೇತುವೆ ನಿಧಾನವಾಗಿ ಕುಸಿಯುತ್ತಿರುವ ದೃಶ್ಯ ಕಂಡು ಬಂದಿದೆ.