
ಬೆಂಗಳೂರು: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಹಸ್ತ್ರತಾಲ್ ಚಾರಣಕ್ಕೆ ತೆರಳಿದ್ದ 20 ಜನರ ಪೈಕಿ 9 ಮಂದಿ ಸಾವನ್ನಪ್ಪಿದ್ದು, ಮೃತ ಚಾರಣಿಗರ ಮೃತದೇಹವನ್ನು ಚಾರ್ಟರ್ ಫ್ಲೈಟ್ ಮೂಲಕ ಬೆಂಗಳೂರಿಗೆ ರವಾನಿಸುವ ಸಲುವಾಗಿ ಉತ್ತರಾಖಂಡ ಮುಖ್ಯಕಾರ್ಯದರ್ಶಿ ರಾಧಾ ರಾತುರಿ ಅವರ ಜೊತೆ ಕೃಷ್ಣಬೈರೇಗೌಡ ಮಾತುಕತೆ ನಡೆಸಿದ ಬಳಿಕ ಉತ್ತರಾಖಂಡ ಮುಖ್ಯಕಾರ್ಯದರ್ಶಿ ಚಾರ್ಟರ್ ಫ್ಲೈಟ್ ಮೂಲಕ ಮೃತದೇಹವನ್ನು ಸಾಗಿಸಲು ಒಪ್ಪಿಕೊಂಡಿದ್ದಾರೆ ಎಂದು ಕೃಷ್ಣಬೈರೇಗೌಡ ಮಾಹಿತಿ ನೀಡಿದ್ದಾರೆ.
ಮರಣೋತ್ತರ ಪರೀಕ್ಷೆ ಉತ್ತರಕಾಶಿಯಲ್ಲಿ ನಡೆಯುತ್ತಿದ್ದು ಬೆಳಗ್ಗೆ 11 ಗಂಟೆಗೆ ಎಲ್ಲಾ 9 ಮೃತದೇಹಗಳನ್ನು ವಿಮಾನದಲ್ಲಿ ಡೆಹ್ರಾಡೂನ್‌ಗೆ ತರಲಾಗುವುದು. ಡೆಹ್ರಾಡೂನ್‌ನಲ್ಲಿ ಎಂಬಾಮಿಂಗ್ ಮಾಡಿ ಎಲ್ಲಾ 9 ಶವಗಳನ್ನು ಬೆಂಗಳೂರಿಗೆ ಸಾಗಿಸಲು ನಾವು ಚಾರ್ಟರ್ ಫ್ಲೈಟ್ ಅನ್ನು ಗುರುತಿಸುತ್ತಿದ್ದೇವೆ. ನಾನೀಗ ಉತ್ತರಾಖಂಡದ ಮುಖ್ಯ ಕಾರ್ಯದರ್ಶಿಯನ್ನು ಭೇಟಿ ಮಾಡಲು ಹೊರಟಿದ್ದೇನೆ. ಮುಖ್ಯ ಕಾರ್ಯದರ್ಶಿಯವರೊಂದಿಗಿನ ನನ್ನ ಸಭೆಯ ನಂತರ ಮೃತದೇಹಗಳ ರವಾನೆಯ ಬಗ್ಗೆ ಸ್ಪಷ್ಟತೆ ನೀಡಬಹುದು ಎಂದು ನಾನು ಭಾವಿಸುತ್ತೇನೆ ಎಂದು ಕೃಷ್ಣಬೈರೇಗೌಡ ಎಕ್ಸ್‌ನಲ್ಲಿ ಟ್ವೀಟ್ ಮಾಡಿ ಹಂಚಿಕೊಂಡಿದ್ದಾರೆ.
ಎಸ್‌ಡಿಆರ್‌ಎಫ್‌ನಿಂದ ಸುರಕ್ಷಿತವಾಗಿ ರಕ್ಷಿಸಲ್ಪಟ್ಟ 11 ಚಾರಣಿಗರ ವಿವರ:
ಜೈ ಪ್ರಕಾಶ್ ವಿ.ಎಸ್ (61), ಗಿರಿನಗರ ಬೆಂಗಳೂರು ನಿವಾಸಿ
ಭರತ್ ವಿ (53), ಹಂಪಿನಗರ, ಬೆಂಗಳೂರು ನಿವಾಸಿ
ಅನೀಲ್ ಭಟ್ (52), ನಿವಾಸಿ ಜೋಪ್ ನಗರ ಬೆಂಗಳೂರು
ಮಧುಕಿರಣ್ ರೆಡ್ಡಿ (52), ಬೆಂಗಳೂರು ನಿವಾಸಿ
ಶೀನ ಲಕ್ಷ್ಮಿ (48), ಕೆ.ಆರ್.ಪುರಂ ಬೆಂಗಳೂರು ನಿವಾಸಿ
ಶೌಮ್ಯಾ ಕೆ (31), ಬೆಂಗಳೂರು ನಿವಾಸಿ
ಶಿವ ಜ್ಯೋತಿ (45), ಹೆಚ್‌ಎಸ್‌ಆರ್ ಬೆಂಗಳೂರು ನಿವಾಸಿ
ಸ್ಮೂರ್ತಿ ಪ್ರಕಾಶ್ ಡೋಲಾಸ್ (45), ಮಹಾರಾಷ್ಟ್ರದ ಪುಣೆ ನಿವಾಸಿ
ವಿನಾಯಕ್ ಎಂ.ಕೆ (47), ರೆಸಿಡೆಂಟ್ ಪ್ರೆಸ್ಟೀಜ್ ಸಿಟಿ, ಬೆಂಗಳೂರು
ಶ್ರೀರಾಮಲ್ಲು ಸುಧಾಕರ್ (64), ಬೆಂಗಳೂರು ಎಸ್‌ಆರ್‌ಕೆ ನಗರ ನಿವಾಸಿ
ವಿವೇಕ್ ಶ್ರೀಧರ್ (37), ಬೆಂಗಳೂರು,
ಸೌಮ್ಯಾ ಕೆನಾಲೆ, ಸ್ಮೃತಿ ಡೋಲಾಸ್, ಶೀನಾ ಲಕ್ಷ್ಮಿ, ಎಸ್ ಶಿವಜ್ಯೋತಿ, ಅನಿಲ್ ಜಮತಿಗೆ ಅರುಣಾಚಲ ಭಟ್, ಭರತ್ ಬೊಮ್ಮನ ಗೌಡರ್, ಮಧು ಕಿರಣ್ ರೆಡ್ಡಿ, ಜೈಪ್ರಕಾಶ್ ಬಿಎಸ್ ಎಂಬವರನ್ನು ಸುರಕ್ಷಿತವಾಗಿ ಡೆಹ್ರಾಡೂನ್‌ಗೆ ಸ್ಥಳಾಂತರಿಸಲಾಗಿದ್ದು ಎಸ್ ಸುಧಾಕರ್, ವಿನಯ್ ಎಂಕೆ, ವಿವೇಕ್ ಶ್ರೀಧರ್, ನವೀನ್ ಎ, ರಿತಿಕಾ ಜಿಂದಾಲ್ ಎಂಬ 5 ಚಾರಣಿಗರನ್ನು ಕೂಡ ರಕ್ಷಿಸಿದ್ದು, ಇಂದು ಬೆಳಗ್ಗೆ 11 ಗಂಟೆಗೆ ಉತ್ತರಕಾಶಿಯಿಂದ ಡೆಹ್ರಾಡೂನ್‌ಗೆ ವಿಮಾನದಲ್ಲಿ ಕಳುಹಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.