ಬದುಕಿಗಿಂತ ದೇಶ ಮಿಗಿಲೆಂಬ ಭಾವ ಸರ್ವರಲ್ಲಿರಲಿ :ಕೋಟ ಶ್ರೀನಿವಾಸ ಪೂಜಾರಿ

ಜ್ಞಾನಸುಧಾ ಶಿಕ್ಷಣ ಸಂಸ್ಥೆಯಿಂದ ಒಂದು ವರ್ಷಕ್ಕೆ 227 ವಿದ್ಯಾರ್ಥಿಗಳು ಎಂ.ಬಿ.ಬಿ.ಎಸ್.ಗೆ ಸೇರ್ಪಡೆಯಾಗಿರುವುದು ರಾಜ್ಯಕ್ಕೆ
ಮಾತ್ರವಲ್ಲ ದೇಶಕ್ಕೆ ಮಾದರಿ. ಜ್ಞಾನಸುಧಾದಂತಹ ಒಂದು ಸಂಸ್ಥೆಯನ್ನು ಸೃಷ್ಟಿಮಾಡಲು ಯಾವ ಸರ್ಕಾರಕ್ಕೂ ಸಾಧ್ಯವಿಲ್ಲ. ಇಂತಹ ಸಂಸ್ಥೆಯನ್ನು ದೇಶಕ್ಕೆ ಕೊಡುಗೆಯಾಗಿ ನೀಡಿ ಬದುಕಿಗಿಂತ ದೇಶ ಮಿಗಿಲೆಂಬ ಡಾ. ಸುಧಾಕರ ಶೆಟ್ಟಿಯವರ ಗುಣ ಅಣುಕರಣೀಯ ಎಂದು ಉಡುಪಿ, ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿದರು.
ಇವರು ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಗಾಂಧಿ ಆಸ್ಪತ್ರೆ, ಉಡುಪಿ ಇದರ ಮೆಡಿಕಲ್ ಡೈರೆಕ್ಟರ್ ಆದ ಡಾ. ವ್ಯಾಸರಾಜ ತಂತ್ರಿ ಇವರು ಮಾತನಾಡಿ ಪ್ರತಿಭೆಯೊಂದಿಗೆ ಪರಿಶ್ರಮ ಮತ್ತು ಸಂಸ್ಕಾರ ಜೊತೆಯಾದಾಗ ಅದೊಂದು ಶಕ್ತಿಯಾಗಿ ಪರಿವರ್ತನೆಯಾಗುತ್ತದೆ. ವಿದ್ಯಾರ್ಥಿಗಳು ಬದುಕನ್ನು ರೂಪುಗೊಳಿಸಿಕೊಳ್ಳುವ ಈ ಕಾಲದಲ್ಲಿ ಪ್ರತಿಭಾ ಪುರಸ್ಕಾರ ಪ್ರೇರಣೆಯಾಗಲಿ. ಬೃಹತ್ ಗುರಿಯೊಂದಿಗೆ ಸತ್ಯದ ದಾರಿಯಲ್ಲಿ ಸಾಗಿ ಎಂದರು.
ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿಯವರು ಪ್ರಾಸ್ತಾವಿಕವಾಗಿ
ಮಾತನಾಡಿದರು. “ವೈದ್ಯೋ ನಾರಾಯಣೋ ಹರಿ” ಎಂಬಂತೆ ಡಾ. ವ್ಯಾಸರಾಜ ತಂತ್ರಿಗಳು ಶ್ರೇಷ್ಠ ಕೈಂಕರ್ಯವನ್ನು
ಮಾಡುತ್ತಿದ್ದಾರೆ ಅವರ ಬದುಕು ವಿದ್ಯಾರ್ಥಿಗಳಿಗೆ ಆದರ್ಶವಾಗಲಿ. ವಿದ್ಯಾರ್ಥಿಗಳು ತಮ್ಮ ಶ್ರಮದ ಹಿಂದೆ ತಂದೆ ತಾಯಿ ಶಿಕ್ಷಕರ
ಶ್ರಮ ಅಡಗಿದೆ ಎಂಬುದನ್ನು ಅರಿತು ಬಾಳಿ ಎಂದರು. ಈ ಸಂದರ್ಭದಲ್ಲಿ ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯ ಸಾಧಕ ವಿದ್ಯಾರ್ಥಿಗಳಿಗೆ ಮತ್ತು ಪ್ರಥಮ ಪಿ.ಯು.ಸಿ.ಯ ಸಾಧಕ ವಿದ್ಯಾರ್ಥಿಗಳಿಗೆ, ಉಸನ್ಯಾಸಕರುಗಳಿಗೆ ಅಜೆಕಾರು ಪದ್ಮಗೋಪಾಲ್ಎ ಜ್ಯುಕೇಶನ್ ಟ್ರಸ್ಟ್ನ ವತಿಯಿಂದ 39 ಲಕ್ಷದ 20 ಸಾವಿರ ರೂಗಳ ಪ್ರೋತ್ಸಾಹ ಧನವನ್ನು ನೀಡಲಾಯಿತು.
ಉಡುಪಿ ಜ್ಞಾನಸುಧಾದ ಪ್ರಾಂಶುಪಾಲರಾಗಿರುವ ಶ್ರೀನಿಧಿ ಭಾಗವತ್, ಮಣಿಪಾಲ ಜ್ಞಾನಸುಧಾದ ಪ್ರಾಂಶುಪಾಲರಾದ ಗಣೇಶ್
ಶೆಟ್ಟಿ, ಅಜೆಕಾರು ಜ್ಞಾನಸುಧಾದ ಪ್ರಾಂಶುಪಾಲರಾದ ಸಂತೋಶ್, ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಡೀನ್ ಅಕಾಡೆಮಿಕ್ಸ್ ಡಾ. ಮಿಥನ್
ಯು, ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಉಪಪ್ರಾಂಶುಪಾಲೆಯಾಗಿರುವ ವಾಣಿ ಕೆ, ಉಪಪ್ರಾಂಶುಪಾಲರಾದ ಪ್ರಕಾಶ್ ಜೋಗಿ ಮೊದಲಾದವರು ಉಪಸ್ಥಿತರಿದ್ದರು. ಬೌತಶಾಸ್ತ್ರ ಉಪನ್ಯಾಸಕಿ ಜ್ಯೋತ್ಸ್ನಾಇವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.











































