31 C
Udupi
Thursday, April 23, 2026
spot_img
spot_img
HomeBlogಉಡುಪಿ ಜಿಲ್ಲಾ ಕ್ರೀಡಾ ಭಾರತಿಯಿಂದ ವಿಶಿಷ್ಟ ರೀತಿಯಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ

ಉಡುಪಿ ಜಿಲ್ಲಾ ಕ್ರೀಡಾ ಭಾರತಿಯಿಂದ ವಿಶಿಷ್ಟ ರೀತಿಯಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ

ಉಡುಪಿ ಜಿಲ್ಲಾ ಕ್ರೀಡಾ ಭಾರತಿಯಿಂದ ವಿಶಿಷ್ಟ ರೀತಿಯಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ* ದಿನಾಂಕ 29 ಆಗಸ್ಟ್ 2024ರಂದು ಕ್ರೀಡಾ ಭಾರತಿ ಉಡುಪಿ ಜಿಲ್ಲಾ ವತಿಯಿಂದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಜಿಲ್ಲೆಯ ಎಲ್ಲಾ ತಾಲೂಕಿನ ನಿವೃತ್ತ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕರನ್ನು ಗುರುತಿಸಿ ಅವರ ಮನೆಗೆ ತೆರಳಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಕಳ ತಾಲೂಕಿನ ಎಂವಿ ಉಪಾಧ್ಯ, ಕಾಪು ತಾಲೂಕು ಗೋವಿಂದ ಚಿಪ್ಲೂನ್ಕರ್, ಮುಂಡ್ಕೂರಿನ ರಘುಪತಿ ರಾವ್, ಹೆಬ್ರಿಯ ಮುತ್ತಯ್ಯ ಶೆಟ್ಟಿ, ಬ್ರಹ್ಮಾವರ ಶ್ರೀನಿವಾಸ ಹೆಗ್ಡೆ, ಉಡುಪಿಯ ಮೋಹನ್ ದಾಸ ಶೆಟ್ಟಿ, ಕುಂದಾಪುರ ಗಣಪಯ್ಯ ಶೆಟ್ಟಿ ಹಾಗೂ ಬೈಂದೂರು ತಾಲೂಕಿನ ಜಯರಾಮ ಶೆಟ್ಟಿ, ಇವರುಗಳನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಒಂದು ಸಂತೋಷದ ಮತ್ತು ಅವಿಸ್ಮರಣೆಯ ಕಾರ್ಯಕ್ರಮದಲ್ಲಿ ಕ್ರೀಡಾ ಭಾರತಿ ಮಂಗಳೂರು ವಿಭಾಗ ಸಂಯೋಜಕರಾದ ಪ್ರಸನ್ನ ಶೆಣೈ, ಉಡುಪಿ ಜಿಲ್ಲಾ ಗೌರವಾಧ್ಯಕ್ಷರಾದ ಕೋಟ ವಸಂತ ಶೆಟ್ಟಿ, ಉಡುಪಿ ಜಿಲ್ಲಾ ಅಧ್ಯಕ್ಷರಾದ ಬೈಲೂರು ಮಂಜುನಾಥ ಶೆಟ್ಟಿ, ಹೆಬ್ರಿ ತಾಲೂಕು ಘಟಕದ ಅಧ್ಯಕ್ಷರಾದ ಸೀತಾನದಿ ವಿಠಲಶೆಟ್ಟಿ, ಹೆಬ್ರಿ ತಾಲೂಕು ಘಟಕದ ಕಾರ್ಯದರ್ಶಿಯಾದ ವಿಜಯಕುಮಾರ್ ಶೆಟ್ಟಿ ಹೆಬ್ರಿ, ಕುಂದಾಪುರ ತಾಲೂಕು ಕಾರ್ಯದರ್ಶಿ ಸುಕೇಶ್ ಶೆಟ್ಟಿ ಕೊಲ್ಲೂರು, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಗಣಪಯ್ಯ ಕಾರ್ಕಳ ಹಾಗೂ ಕೊಕ್ಕರ್ಣೆಯ ನಿವೃತ್ತ ದೈಹಿಕ ಶಿಕ್ಷಣ ಉಪನ್ಯಾಸಕರಾದ ಶ್ರೀಧರ ಶೆಟ್ಟಿ ಉಪಸ್ಥಿತರಿದ್ದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page