
ಉಡುಪಿ: ನಗರಸಭಾ ವ್ಯಾಪ್ತಿಯಲ್ಲಿ ನಗರಸಭೆಯ ಅಧಿಕಾರಿ ಹಾಗೂ ಸಿಬಂದಿಗಳ ಹೆಸರಿನಲ್ಲಿ ಅನಧಿಕೃತವಾಗಿ ಉದ್ದಿಮೆ ಪರವಾನಿಗೆ, ಪ್ಲಾಸ್ಟಿಕ್ ರೈಡ್ಗಳನ್ನು ನಡೆಸಿ ಹಣ ಪಡೆದು ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದೆ.
ಈ ಬಗ್ಗೆ ನಗರಸಭೆ ಪೌರಾಯುಕ್ತರ ಕಚೇರಿಯು ಪ್ರಕಟನೆ ಹೊರಡಿಸಿದ್ದು ನಗರಸಭೆಯ ಅಧಿಕಾರಿಗಳು ಅಥವಾ ಸಿಬ್ಬಂದಿಗಳು ಗುರುತಿನ ಚೀಟಿಯೊಂದಿಗೆ ಬಂದಲ್ಲಿ ಮಾತ್ರ ಯಾವುದೇ ಉದ್ದಿಮೆ ಪರವಾನಿಗೆ ಸಮೀಕ್ಷೆ, ಪ್ಲಾಸ್ಟಿಕ್ ಕಾರ್ಯಾಚರಣೆಗೆ ಅಂಗಡಿ ಮಾಲಕರು ಅವಕಾಶ ಮಾಡಿಕೊಡಬೇಕು. ಇಲ್ಲವಾದಲ್ಲಿ ಯಾವುದೇ ವ್ಯಕ್ತಿಗಳು ನಗರಸಭೆಯ ಹೆಸರಿನಲ್ಲಿ ವಂಚಿಸಿದಲ್ಲಿ ಅದಕ್ಕೆ ನಗರಸಭೆಯು ಜವಾಬ್ದಾರಿಯಾಗಿರುವುದಿಲ್ಲ ಎಂದು ಮಾಹಿತಿ ನೀಡಿದೆ.













