28.5 C
Udupi
Saturday, May 9, 2026
spot_img
spot_img
HomeBlogಉಗ್ರರ ಹೇಯ ಕೃತ್ಯ ಬ್ಲಾಕ್ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ: ಶುಭದ ರಾವ್

ಉಗ್ರರ ಹೇಯ ಕೃತ್ಯ ಬ್ಲಾಕ್ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ: ಶುಭದ ರಾವ್

ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿ ದುರಾದೃಷ್ಟಕರ, ಈ ದಾಳಿಯನ್ನು ಬ್ಲಾಕ್ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತಾ ದಾಳಿಯಲ್ಲಿ ಮಡಿದ ಕರ್ನಾಟಕದ ಇಬ್ಬರು ಸೇರಿ ಇತರ ಸಹೋದರರಿಗೆ ಶೃದ್ದಾಂಜಲಿಯನ್ನು ಸಲ್ಲಿಸುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಶುಭದರಾವ್ ತಿಳಿಸಿದ್ದಾರೆ.

ಉಗ್ರರ ದಮನಕ್ಕೆ ಕೇಂದ್ರ ಸರಕಾರ ತಕ್ಷಣ‌ ಕಾರ್ಯ ಪ್ರವ್ರತವಾಗಬೇಕು ಸರಕಾರ ತೆಗೆದುಕೊಳ್ಳುವ ಯಾವುದೇ ಕಾನೂನಾತ್ಮಕ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ ಎಂದು ತಿಳಿಸಿದ್ದಾರೆ.

ಆದರೆ ಸರಕಾರದ ವೈಫಲ್ಯವನ್ನು ಮೆರೆ ಮಾಚಲು ಸಾದ್ಯವಿಲ್ಲ ಗಡಿಯಲ್ಲಿ ಉಗ್ರರ ದಾಳಿಯನ್ನು ತಡೆಯಲು ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದೆ, ಇದು ಗೃಹ ಇಲಾಖೆಯ ಗಂಭೀರ ವೈಫಲ್ಯವನ್ನು ತೋರಿಸುತ್ತದೆ.‌ 500 ಕ್ಕೂ ಹೆಚ್ಚು ಪ್ರವಾಸಿಗರು ಒಂದೇ ಕಡೆ ಸೇರಿದ್ದರೂ ಒಬ್ಬನೇ ಒಬ್ಬ ಭದ್ರತಾ ಸಿಬಂದಿ ಇಲ್ಲದಿರುವುದು ಭದ್ರತಾ ಲೋಪವಲ್ಲದೆ ಬೇರೇನೂ ಅಲ್ಲ, ಇವರ ಆರ್ಭಟ ಆಕ್ರೋಶಗಳು ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಯಿತು ಎಂದೆನಿಸುತ್ತದೆ ಬೇರೆ ಸರಕಾರಗಳು ಆಡಳಿತ ನಡೆಸುವಾಗ ಉಗ್ರರ ದಾಳಿಗಳಾದಾಗ ರಾಜೀನಾಮೆ ಕೇಳುತ್ತಿದ್ದವರು ಮೌನವಾಗಿದ್ದಾರೆ ಎಂದರು.

ಸುರಕ್ಷತಾ ಲೋಪಗಳಿಗೆ ಕೇಂದ್ರ ಸರ್ಕಾರವು ಸಾರ್ವಜನಿಕರಿಗೆ ಉತ್ತರಿಸಬೇಕು ಪ್ರಧಾನಿಯವರ 56 ಇಂಚಿನ ಎದೆಯ ಶಕ್ತಿ ಏನೆಂಬುದು ದೇಶಕ್ಕೆ ತೋರಿಸುವ ಕಾಲ ಬಂದಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page