
ತುಳು ನಾಟಕ ರಂಗಭೂಮಿಯಲ್ಲಿ ದಾಖಲೆಯ 750 ಪ್ರದರ್ಶನದೊಂದಿಗೆ ಪ್ರದರ್ಶನಗೊಳ್ಳುತ್ತಿರುವ ಶಿವದೂತೆ ಗುಳಿಗೆ ಎನ್ನುವ ಅದ್ದೂರಿ ನಾಟಕವನ್ನು ರಚಿಸಿದ ಅಕ್ಷರ ಬ್ರಹ್ಮ ಬಿರುದಾಂಕಿತ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಇವರ ನಿರ್ದೇಶನದ ಛತ್ರಪತಿ ಶಿವಾಜಿ ತುಳು ನಾಟಕವು ಇಂದು ಸಂಜೆ 7 ಗಂಟೆಗೆ ಕಾರ್ಕಳ ಗಾಂಧಿ ಮೈದಾನದಲ್ಲಿ ಉಚಿತ ಪ್ರದರ್ಶನಗೊಳ್ಳಲಿದೆ,
ಕ್ಷತ್ರೀಯ ಮರಾಠ ಸಮಾಜ ರಿ ಕಾರ್ಕಳ ಇವರ ಆಶ್ರಯದಲ್ಲಿ ನಾಟಕವು ನಡೆಯಲಿದ್ದು ಕಲಾಸಂಗಮ ಕಲಾವಿದರ ಅದ್ಭುತ ನಟನೆ, ಮನಸೂರೆಗೊಳ್ಳುವ ರಂಗ ವಿನ್ಯಾಸ, ಮತ್ತು ಖ್ಯಾತ ಗಾಯಕರ ದ್ವನಿಯಲ್ಲಿ ಹಿನ್ನಲೆ ಗಾಯನದೊಂದಿಗೆ ಈ ನಾಟಕವು ಮೂಡಿ ಬಂದಿದೆ ಒಂದು ಉತ್ತಮ ನಾಟಕವನ್ನು ಊರಿನ ಕಲಾಬಿಮಾನಿಗಳಿಗೆ ತೋರಿಸುವ ನಿಟ್ಟಿನಲ್ಲಿ ನಾಟಕವನ್ನು ಆಯೋಜನೆ ಮಾಡಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರಾದ ಶುಭದರಾವ್ ತಿಳಿಸಿದ್ದಾರೆ.