ಹಲವು ಹೊಸ ಮುಖಗಳಿಗೆ ಅವಕಾಶ

ಬೆಂಗಳೂರು: ರಾಜ್ಯದ ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭವಾಗಿದೆ. ಸೋಮವಾರ ಸಂಜೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ 20 ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಈ ಬಾರಿ ಹಲವು ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ.
ಇತ್ತೀಚೆಗೆ ಹೈಕೋರ್ಟ್ ತೀರ್ಪಿನ ಬಳಿಕ ವಿಧಾನ ಪರಿಷತ್ ಸದಸ್ಯೆಯಾಗಿದ್ದ ಗಾಯತ್ರಿ ಶಾಂತೇಗೌಡ ಅವರಿಗೆ ಸಚಿವ ಸ್ಥಾನ ದೊರೆತಿದೆ. ನೂತನ ಸಚಿವರ ಪಟ್ಟಿಯಲ್ಲಿ ಪರಿಷತ್‌ನಿಂದ ಸ್ಥಾನ ಪಡೆದಿರುವ ಏಕೈಕ ಸದಸ್ಯೆ ಅವರೇ.
ರೋಣ ಶಾಸಕ ಜಿ.ಎಸ್. ಪಾಟೀಲ್ ಅವರನ್ನು ವಿಧಾನಸಭೆ ಸ್ಪೀಕರ್ ಆಗಿ ಹಾಗೂ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಉಪಸಭಾಪತಿಯಾಗಿ ಆಯ್ಕೆ ಮಾಡಲಾಗಿದೆ.
ದಾವಣಗೆರೆ ಜಿಲ್ಲೆಯ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಅಚ್ಚರಿಯ ಆಯ್ಕೆಯಾಗಿ ಸಚಿವ ಸಂಪುಟ ಪ್ರವೇಶಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಅವರ ಪುತ್ರ ಅಜಯ್ ಸಿಂಗ್ ಕೂಡ ಸಚಿವ ಸ್ಥಾನ ಪಡೆದಿದ್ದಾರೆ.
ಇನ್ನೊಂದೆಡೆ, ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿದ್ದ ಎಚ್.ಸಿ. ಮಹದೇವಪ್ಪ, ಎಂ.ಸಿ. ಸುಧಾಕರ್, ದಿನೇಶ್ ಗುಂಡೂರಾವ್, ಎಚ್.ಕೆ. ಪಾಟೀಲ್, ಕೆ. ವೆಂಕಟೇಶ್, ಲಕ್ಷ್ಮಿ ಹೆಬ್ಬಾಳ್ಕರ್, ಶಿವಾನಂದ ಪಾಟೀಲ್ ಹಾಗೂ ಶರಣಬಸಪ್ಪ ದರ್ಶನಾಪುರ ಅವರಿಗೆ ಈ ಬಾರಿ ಸಚಿವ ಸ್ಥಾನ ಸಿಕ್ಕಿಲ್ಲ.
ನೂತನ ಸಚಿವರ ಪಟ್ಟಿ:
ಪಿ.ಎಂ. ನರೇಂದ್ರಸ್ವಾಮಿ
ಶಿವರಾಜ್ ತಂಗಡಗಿ
ರುದ್ರಪ್ಪ ಲಮಾಣಿ
ಕೆ.ಎಸ್. ಬಸವಂತಪ್ಪ
ಬಿ. ನಾಗೇಂದ್ರ
ಟಿ. ರಘುಮೂರ್ತಿ
ಜಮೀರ್ ಅಹ್ಮದ್ ಖಾನ್
ರಿಜ್ವಾನ್ ಅರ್ಷದ್
ಸಂತೋಷ್ ಲಾಡ್
ಮಧು ಬಂಗಾರಪ್ಪ
ಪುಟ್ಟರಂಗ ಶೆಟ್ಟಿ
ಎಸ್.ಎಸ್. ಮಲ್ಲಿಕಾರ್ಜುನ
ಅಜಯ್ ಸಿಂಗ್
ಎನ್. ಚೆಲುವರಾಯಸ್ವಾಮಿ
ಕೆ.ಎಂ. ಶಿವಲಿಂಗೇಗೌಡ
ಎಚ್.ಸಿ. ಬಾಲಕೃಷ್ಣ
ಗಾಯತ್ರಿ ಶಾಂತೇಗೌಡ
ಬಸವರಾಜ ರಾಯರೆಡ್ಡಿ
ವಿಜಯಾನಂದ ಕಾಶಪ್ಪನವರ್
ಲಕ್ಷ್ಮಣ ಸವದಿ























































