
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಂಗಳವಾರ ವಾರಾಣಸಿಯಲ್ಲಿ ಕೇಂದ್ರ ಸರ್ಕಾರದಿಂದ ನೀಡಲಾಗುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 17ನೇ ಕಂತಿನ ಹಣ ಅಧಿಕೃತವಾಗಿ ಹಣ ಬಿಡುಗಡೆ ಮಾಡಲಿದ್ದಾರೆ.
ಸಂಜೆಯ ಒಳಗೆ 9.3 ಕೋಟಿ ರೈತರ ಖಾತೆಗಳಿಗೆ ಒಟ್ಟು 20,000 ಕೋಟಿ ರೂ ಹಣ ಜಮೆಯಾಗಲಿದ್ದು ಪ್ರತಿಯೊಂದು ಖಾತೆಗೂ 2,000 ರೂ ಹಣ ವರ್ಗಾವಣೆಯಾಗಲಿದೆ.
ಕಳೆದ ಒಂದು ವರ್ಷದಿಂದಲೂ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಇಕೆವೈಸಿ ಅಪ್ಡೇಟ್ ಮಾಡುವಂತೆ ಸರ್ಕಾರ ಸೂಚಿಸುತ್ತಿದ್ದು ಕಳೆದ ಮೂರು ಬಾರಿಯಿಂದಲೂ ಇಕೆವೈಸಿ ಮಾಡದವರಿಗೆ ಯೋಜನೆಯ ಹಣ ಬರುತ್ತಿಲ್ಲ. ಯೋಜನೆಯ ಫಲಾನುಭವಿಗಳಾಗಿದ್ದು, ಹಣ ಬರುತ್ತಿಲ್ಲವಾದಲ್ಲಿ ಇಕೆವೈಸಿ ಅಪ್ಡೇಟ್ ಮಾಡಿಲ್ಲದೇ ಇರಬಹುದು. ಒಂದು ವೇಳೆ ಇತ್ತೀಚೆಗೆ ಇಕೆವೈಸಿ ಅಪ್ಡೇಟ್ ಮಾಡಿದ್ದಲ್ಲಿ ನಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿ ಇದೆಯಾ ಎಂದು ಪರಿಶೀಲಿಸಬೇಕು.
ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿ ಪರಿಶೀಲಿಸುವ ಕ್ರಮ:
ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ pmkisan.gov.in/ ಗೆ ಹೋಗಿ
ಮುಖ್ಯಪುಟದಲ್ಲಿ ತುಸು ಕೆಳಗೆ ಸ್ಕ್ರೋಲ್ ಮಾಡಿದರೆ ಫಾರ್ಮರ್ಸ್ ಕಾರ್ನರ್ ಸೆಕ್ಷನ್ ಕಾಣಬಹುದು.
ಇಲ್ಲಿ ‘ಬೆನಿಫಿಶಿಯರಿ ಲಿಸ್ಟ್’ ಅನ್ನು ಕ್ಲಿಕ್ ಮಾಡಿ
ಇಲ್ಲಿ ನಮ್ಮ ರಾಜ್ಯ, ಜಿಲ್ಲೆ, ತಾಲೂಕು, ಊರನ್ನು ಆಯ್ದುಕೊಂಡು ಗೆಟ್ ರಿಪೋರ್ಟ್ ಕ್ಲಿಕ್ ಮಾಡಬೇಕು.
ಇಲ್ಲಿ ನಮ್ಮ ಊರಿನ ಎಲ್ಲಾ ಫಲಾನುಭವಿಗಳ ಪಟ್ಟಿಯನ್ನು ಕಾಣಬಹುದು. ಇದರಲ್ಲಿ ನಮ್ಮ ಹೆಸರು ಇದೆಯಾ ಪರಿಶೀಲಿಸಬಹುದಾಗಿದೆ.