ನವದೆಹಲಿ: ಉತ್ತರಾಖಂಡ ಸರ್ಕಾರವು ಯೋಗ ಗುರು ಬಾಬಾ ರಾಮ್‌ದೇವ್ ಅವರ ಪತಂಜಲಿ ಸಂಸ್ಥೆಯ 14 ಉತ್ಪನ್ನಗಳ ಲೈಸೆನ್ಸ್ ಅನ್ನು ರದ್ದು ಮಾಡಿ ಆದೇಶ ಹೊರಡಿಸಿದೆ.
ಪತಂಜಲಿ ಸಂಸ್ಥೆಗೆ ಸೇರಿದ ದಿವ್ಯಾ ಫಾರ್ಮಸಿ ಉತ್ಪಾದಿಸುವ ‘ದೃಷ್ಟಿ ಐ ಡ್ರಾಪ್’, ‘ಸ್ವಾಸರಿ ಗೋಲ್ಡ್’, ‘ಸ್ವಾಸರಿ ವಟಿ’, ‘ಬ್ರೋನ್‌ಚೋಂ’, ‘ಸ್ವಾಸರಿ ಪ್ರವಾಹಿ’, ‘ಸ್ವಾಸರಿ ಅವಲೇಹ್’, ‘ಮುಕ್ತಾ ವಟಿ ಎಕ್ಸ್ಟ್ರಾ ಪವರ್’, ‘ಲಿಪಿಡೋಮ್’, ‘ಬಿಪಿ ಗ್ರಿಟ್’, ‘ಮಧುಗ್ರಿಟ್’, ‘ಮಧುನಾಶಿನಿ ವಟಿ ಎಕ್ಟ್ರಾ ಪವರ್’, ‘ಲಿವಾಮೃತ್ ಅಡ್ವಾನ್ಸ್’, ‘ಲಿವೋಗ್ರಿಟ್’ ಮತ್ತು ‘ಐಗ್ರಿಟ್ ಗೋಲ್ಡ್’ ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಲಾಗಿದೆ.