32.5 C
Udupi
Wednesday, April 30, 2025
spot_img
spot_img
HomeBlogಆರ್‌ಎಸ್‌ಎಸ್‌ನಿಂದ ನನ್ನ ಜೀವನದ ಉದ್ದೇಶ ಕಂಡುಕೊಂಡಿದ್ದೇನೆ: ನರೇಂದ್ರ ಮೋದಿ

ಆರ್‌ಎಸ್‌ಎಸ್‌ನಿಂದ ನನ್ನ ಜೀವನದ ಉದ್ದೇಶ ಕಂಡುಕೊಂಡಿದ್ದೇನೆ: ನರೇಂದ್ರ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಲೆಕ್ಸ್ ಫ್ರಿಡ್‌ಮನ್ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿ ಆರ್‌ಎಸ್‌ಎಸ್‌ಗಿಂತ ದೊಡ್ಡ ಸ್ವಯಂಸೇವ ಸಂಘ ಜಗತ್ತಿನಲ್ಲಿ ಇಲ್ಲ. ಆರ್‌ಎಸ್‌ಎಸ್‌ ನಂತಹ ಗೌರವಾನ್ವಿತ ಸಂಸ್ಥೆಯಿಂದ ನಾನು ಜೀವನದ ಸಾರ ಮತ್ತು ಮೌಲ್ಯಗಳನ್ನು ಕಲಿತಿದ್ದೇನೆ. ನಾನು ನನ್ನ ಜೀವನದ ಉದ್ದೇಶ ಕಂಡುಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಬಾಲ್ಯದಲ್ಲಿ ಆರ್‌ಎಸ್‌ಎಸ್ ಕೂಟಗಳಲ್ಲಿ ಭಾಗವಹಿಸುವುದು ಸಂತೋಷವಾಗುತ್ತಿತ್ತು. ಆಗಲೂ ನನ್ನ ಮನಸ್ಸಿನಲ್ಲಿ ಯಾವಾಗಲೂ ಒಂದು ಗುರಿ ಇತ್ತು. ಅದರಂತೆ ದೇಶಕ್ಕೆ ಉಪಯೋಗವಾಗುವುದನ್ನು ಮಾಡಲು ‘ಸಂಘ’ ನನಗೆ ಕಲಿಸಿದೆ. ಈ ವರ್ಷ ಆರ್‌ಎಸ್‌ಎಸ್ 100 ವರ್ಷಗಳನ್ನು ಪೂರೈಸಿದೆ ಎಂಬುದು ಹೆಮ್ಮೆ ಎಂದು ಶ್ಲಾಘಿಸಿದರು.

ಆರ್‌ಎಸ್‌ಎಸ್‌ಗಿಂತ ದೊಡ್ಡ ‘ಸ್ವಯಂಸೇವ ಸಂಘ’ ಜಗತ್ತಿನಲ್ಲಿ ಇಲ್ಲ. ಆರ್‌ಎಸ್‌ಎಸ್‌ನ ಕಾರ್ಯವನ್ನು ಅರ್ಥಮಾಡಿಕೊಳ್ಳುವುದು ಸುಲಭದ ಕೆಲಸವಲ್ಲ. ನಮ್ಮ ವೈದಿಕ ಸಂತರು ಮತ್ತು ಸ್ವಾಮಿ ವಿವೇಕಾನಂದರು ಏನನ್ನು ಕಲಿಸಿದರೋ ಅದೇ ರೀತಿ ʻಸಮಾಜ ಸೇವೆಯೇ ದೇವರ ಸೇವೆʼ ಎಂದು ಸಂಘ ಕಲಿಸುತ್ತದೆ ಎಂದು ಆರ್‌ಎಸ್‌ಎಸ್‌ ನ ಗುಣಗಾನ ಮಾಡಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page