
ಜೂನ್ 08 ರಂದು ಆಯಿಶಾ ಜ್ಯುವೆಲ್ಲರ್ಸ್ ಕಾರ್ಕಳ ಇದರ ಮಾಲಕರಾದ ಮೊಹಮ್ಮದ್ ಆಸ್ಲಾಂ ಮತ್ತು ಅವರ ಪುತ್ರ ಮೊಹಮ್ಮದ್ ಅರ್ಹನ್ ಸ.ಹಿ.ಪ್ರಾ. ಶಾಲೆ ಉರ್ದು ಕಾರ್ಕಳ ಇಲ್ಲಿನ ಎಲ್ಲಾ ಮಕ್ಕಳಿಗೆ ಉಚಿತವಾಗಿ ಶಾಲಾ ಬ್ಯಾಗ್ ನ್ನು ವಿತರಣೆ ಮಾಡಿದರು.ಈ ಸಂದರ್ಭದಲ್ಲಿ ಶಾಲಾ ಸಿಬ್ಬಂದಿ ವರ್ಗ,ಶಾಲಾ ಎಸ್.ಡಿ. ಎಂ. ಸಿ, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಹಾಗೂ ಪೋಷಕರು ಹಾಜರಿದ್ದರು.
