26.9 C
Udupi
Wednesday, July 22, 2026
spot_img
spot_img
HomeBlogಅಮೆರಿಕಾಗೆ ಆಮದಾಗುವ ಜೆನೆರಿಕ್ ಔಷಧಗಳ ಮೇಲೆ ಭಾರಿ ಸುಂಕ..!

ಅಮೆರಿಕಾಗೆ ಆಮದಾಗುವ ಜೆನೆರಿಕ್ ಔಷಧಗಳ ಮೇಲೆ ಭಾರಿ ಸುಂಕ..!

ಭಾರತದ ಔಷಧ ರಫ್ತಿಗೆ ಟ್ರಂಪ್ ನಿರ್ಧಾರದಿಂದ ಆತಂಕ

ವಾಷಿಂಗ್ಟನ್: ಅಮೆರಿಕಕ್ಕೆ ಆಮದು ಆಗುವ ಜೆನೆರಿಕ್ ಔಷಧಗಳ ಮೇಲೆ ಹಂತ ಹಂತವಾಗಿ ಭಾರಿ ಸುಂಕ ವಿಧಿಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ಕ್ರಮವು ‘ವಿಶ್ವದ ಫಾರ್ಮಸಿ’ ಎಂದೇ ಗುರುತಿಸಲ್ಪಡುವ ಭಾರತದ ಔಷಧ ಉದ್ಯಮದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

‘ಟ್ರೂತ್ ಸೋಶಿಯಲ್’ನಲ್ಲಿ ಮಾಹಿತಿ ಹಂಚಿಕೊಂಡಿರುವ ಟ್ರಂಪ್, 2026ರ ಆಗಸ್ಟ್ 1ರಿಂದ ಎರಡು ವರ್ಷಗಳ ಕಾಲ ಜೆನೆರಿಕ್ ಔಷಧಗಳಿಗೆ ಶೂನ್ಯ ಸುಂಕ ಇರಲಿದೆ ಎಂದಿದ್ದಾರೆ. ಬಳಿಕ ಮೂರನೇ ವರ್ಷದಿಂದ ಶೇ.100 ಮತ್ತು ನಂತರ ಶೇ.200ರವರೆಗೆ ಆಮದು ಸುಂಕ ಹೆಚ್ಚಿಸಲಾಗುವುದು ಎಂದು ತಿಳಿಸಿದ್ದಾರೆ.

ಅಮೆರಿಕದಲ್ಲೇ ಔಷಧ ಉತ್ಪಾದನೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ನಿಗದಿತ ಅವಧಿಯಲ್ಲಿ ಅಮೆರಿಕದಲ್ಲಿ ಉತ್ಪಾದನಾ ಘಟಕ ಸ್ಥಾಪಿಸದ ವಿದೇಶಿ ಕಂಪನಿಗಳಿಗೆ ಈ ಸುಂಕ ಅನ್ವಯವಾಗಲಿದೆ. ಆದರೆ ಪೇಟೆಂಟ್ ಹಾಗೂ ಬ್ರಾಂಡೆಡ್ ಔಷಧಗಳ ಮೇಲಿನ ಹಾಲಿ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

ಭಾರತದ ಮೇಲೆ ಪರಿಣಾಮ:

ಅಮೆರಿಕದಲ್ಲಿ ಬಳಕೆಯಾಗುವ ಜೆನೆರಿಕ್ ಔಷಧಗಳಲ್ಲಿ ಸುಮಾರು ಶೇ.40ರಷ್ಟು ಭಾರತದಿಂದ ರಫ್ತಾಗುತ್ತವೆ. ಭಾರತವು ಅಮೆರಿಕಕ್ಕೆ ವಾರ್ಷಿಕ ಸುಮಾರು 9.7 ಬಿಲಿಯನ್ ಡಾಲರ್ (ಸುಮಾರು ₹81,000 ಕೋಟಿ) ಮೌಲ್ಯದ ಔಷಧಗಳನ್ನು ರಫ್ತು ಮಾಡುತ್ತಿದ್ದು, ಇದು ದೇಶದ ಒಟ್ಟು ಔಷಧ ರಫ್ತಿನ ಶೇ.38ರಷ್ಟಾಗಿದೆ.

ಬಿಪಿ, ಮಧುಮೇಹ, ಕ್ಯಾನ್ಸರ್ ಸೇರಿದಂತೆ ಹಲವು ಕಾಯಿಲೆಗಳ ಚಿಕಿತ್ಸೆಗೆ ಭಾರತೀಯ ಕಂಪನಿಗಳ ಜೆನೆರಿಕ್ ಔಷಧಗಳು ಅಮೆರಿಕದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿವೆ. ಗರ್ಭನಿರೋಧಕ ಮಾತ್ರೆಗಳಲ್ಲೂ ಶೇ.65ರಷ್ಟು ಪೂರೈಕೆಯನ್ನು ಗ್ಲೆನ್‌ಮಾರ್ಕ್ ಮತ್ತು ಲುಪಿನ್ ಕಂಪನಿಗಳು ಮಾಡುತ್ತಿವೆ.

ಎರಡು ವರ್ಷಗಳವರೆಗೆ ಶೂನ್ಯ ಸುಂಕದಿಂದ ತಕ್ಷಣದ ಪರಿಣಾಮ ಇರುವುದಿಲ್ಲ. ಆದರೆ 2028ರ ಬಳಿಕ ಜಾರಿಗೆ ಬರುವ ಭಾರಿ ಸುಂಕದಿಂದ ಭಾರತೀಯ ಔಷಧ ಕಂಪನಿಗಳು ಅಮೆರಿಕದಲ್ಲೇ ಉತ್ಪಾದನಾ ಘಟಕಗಳನ್ನು ಸ್ಥಾಪಿಸಬೇಕಾದ ಪರಿಸ್ಥಿತಿ ಎದುರಾಗಬಹುದು ಅಥವಾ ಅಮೆರಿಕಾದಲ್ಲಿ ಔಷಧಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page