
ಅಮೃತ ಭಾರತಿ ಟ್ರಸ್ಟ್ (ರಿ) ಹೆಬ್ರಿ , ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳು ಹೆಬ್ರಿ, ಸೀತಾನದಿ ಸೌಖ್ಯ ಯೋಗ ಟ್ರಸ್ಟ್ (ರಿ) ಹೆಬ್ರಿ ಮತ್ತು ಕ್ರೀಡಾ ಭಾರತಿ ಹೆಬ್ರಿ ತಾಲೂಕು ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಅಮೃತ ಭಾರತಿ ಸಭಾಂಗಣದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು .
ಹೆಬ್ರಿ ತಾಲೂಕು ತಹಶೀಲ್ದಾರ್ ಎಸ್ ಎ ಪ್ರಸಾದ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಯೋಗ ಜೀವನ ಕ್ರಮವನ್ನು ಕಲಿಸುತ್ತದೆ . ನಾವು ಕ್ರಮಬದ್ಧವಾಗಿ ಕುಳಿತುಕೊಳ್ಳುವುದು , ನಿಂತುಕೊಳ್ಳುವುದು ಕೂಡ ಯೋಗದ ಭಾಗವಾಗಿದೆ . ನಿರಂತರ ಯೋಗಾಭ್ಯಾಸ ಧಲ್ಲಿ ತೊಡಗಿಕೊಂಡು ನಿರೋಗಿಗಳಾಗಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಅಮೃತ ಭಾರತಿ ಟ್ರಸ್ಟ್ ನ ಕಾರ್ಯದರ್ಶಿ ಗಳಾದ ಹೆಚ್ ಗುರುದಾಸ್ ಶೆಣೈ ಯವರು ಮಾತನಾಡಿ , ಋಷಿ ಮುನಿಗಳ ಕಾಲದಲ್ಲೇ ಭಾರತ ವಿಶ್ವಕ್ಕೆ ನೀಡಿದ ಅತಿ ದೊಡ್ಡ ಕೊಡುಗೆ ಯೋಗ . ಯೋಗಕ್ಕೆ ವಿಶ್ವ ಮಾನ್ಯತೆ ಕೊಟ್ಟವರು ಪ್ರಧಾನಿ ನರೇಂದ್ರ ಮೋದಿ ಯ ವರು . ಇಂದು ಅವರ ಪ್ರಯತ್ನದಿಂದ ಮುಸ್ಲಿಂ ರಾಷ್ಟ್ರಗಳು ಸೇರಿದಂತೆ ವಿಶ್ವದ ನೂರ ತೊಂಬತ್ತಕ್ಕೂ ಹೆಚ್ಚು ದೇಶಗಳು ವಿಶ್ವ ಯೋಗ ದಿನಾಚರಣೆಯನ್ನು ಆಚರಿಸುತ್ತಿವೆ ಎಂದರು. ಸೀತಾನದಿ ಸೌಖ್ಯ ಯೋಗ ಟ್ರಸ್ಟ್ ನ ಅಧ್ಯಕ್ಷರಾದ ಸೀತಾನದಿ ವಿಠ್ಠಲ ಶೆಟ್ಟಿ ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ರವರು ಇಂದು ಶ್ರೀನಗರದಲ್ಲಿ ವಿಶ್ವ ಯೋಗ ದಿನವನ್ನು ಆಚರಿಸುತ್ತಿರುವುದು ನಮ್ಮ ದೇಶಕ್ಕೆ ಹೆಮ್ಮೆಯ ಸಂಗತಿ . ಯೋಗ ಈ ಒಂದು ದಿನಕ್ಕೆ ಸೀಮಿತ ವಾಗದೆ , ನಿರಂತರ ಯೋಗಾಭ್ಯಾಸ ಮಾಡುವಂತೆ ಸಲಹೆ ನೀಡಿ ಸರ್ವರನ್ನು ಸ್ವಾಗತಿಸಿದರು . ಅಂತರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ ಪದಕ ವಿಜೇತ ಶಿಕ್ಷಕ ನಿತ್ಯಾನಂದ ಶೆಟ್ಟಿ ಶಿವಪುರ ಅವರನ್ನು ಸನ್ಮಾನಿಸಲಾಯಿತು .
ಟ್ರಸ್ಟ್ ಸದಸ್ಯರಾದ ಯೋಗೀಶ್ ಭಟ್ ಬಾಲಕೃಷ್ಣ ಮಲ್ಯ ,ಹಾಸ್ಟೆಲ್ ಕಮಿಟಿ ಸದಸ್ಯ ರಾಮಕೃಷ್ಣ ಆಚಾರ್ಯ , ಸೌಖ್ಯ ಯೋಗ ಟ್ರಸ್ಟ್ ನ ಉಪಾಧ್ಯಕ್ಷ ವಾದಿರಾಜ್ ಶೆಟ್ಟಿ , ಕ್ರೀಡಾ ಭಾರತಿ ಕಾರ್ಯದರ್ಶಿ ವಿಜಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ವಿಜಯ್ ಕುಮಾರ್ ಕಾರ್ಯಕ್ರಮ ನಿರೂಪಿಸಿ , ವಾದಿರಾಜ್ ಶೆಟ್ಟಿ ವಂದಿಸಿದರು.