
ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ
ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಮತ್ತು ಜೇಸಿಐ
ಬೆಳ್ಮಣ್ಣು ನೇತೃತ್ವದಲ್ಲಿ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ರಂಗಮಂದಿರದಲ್ಲಿ
“ಅಪರಂಜಿ – ಗ್ರಾಮೀಣ ಪ್ರತಿಭೆಗಳ ಕಾರಂಜಿ” ಎರಡು ದಿನಗಳ ಮಕ್ಕಳ ಬೇಸಿಗೆ
ಶಿಬಿರ ಜರಗಿತು.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು
ಬೆಳ್ಮಣ್ಣು ಜೇಸಿಐನ ಘಟಕಾಧ್ಯಕ್ಷರಾದ ಸರಿತಾ ದಿನೇಶ್ ಸುವರ್ಣ ಅವರು ವಹಿಸಿದ್ದರು.
ಕೆದಿಂಜೆ ಶಾಲಾ ನಿವೃತ್ತ ಮುಖ್ಯ ಶಿಕ್ಷಕರಾದ ಎನ್. ಸುಧಾಕರ್ ರಾವ್ ಅವರು
ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜೇಸಿಐ ಪೂರ್ವ
ವಲಯಾಧ್ಯಕ್ಷರಾದ ರಾಕೇಶ್ ಕುಂಜೂರು, ಕಾರ್ಕಳ ಅಮ್ಮಾಸ್ ಸ್ಪೋಟ್ಸ್ & ಗ್ಯಾಲರಿ
ಗಿಫ್ಟ್ ಸೆಂಟರ್‌ನ ಮಾಲಕರಾದ ಸುಧೀರ್ ಪೂಜಾರಿ, ಅಬ್ಬನಡ್ಕ ಶ್ರೀ
ದುರ್ಗಾಪರಮೇಶ್ವರೀ ಭಜನಾ ಮಂಡಳಿಯ ಅಧ್ಯಕ್ಷೆ ಹರಿಣಾಕ್ಷಿ ನಂದೀಶ್
ಪೂಜಾರಿ, ಬೆಳ್ಮಣ್ಣಿನ ನ್ಯಾಯವಾದಿ ಸರಿತಾ ರವೀಂದ್ರ ಶೆಟ್ಟಿ, ಬೆಳ್ಮಣ್ಣು ವಿನಯ
ಹರೀಶ್ ಕುಂದರ್, ಸುಚಿತ್ರ ಮೂಲ್ಯ, ದೀಪಕ್ ಕಾಮತ್ ಕಾಂಜರಕಟ್ಟೆ
ಮೊದಲಾದವರಿದ್ದರು.
ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು
ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‌ನ
ಅಧ್ಯಕ್ಷರಾದ ಬೀರೊಟ್ಟು ದಿನೇಶ್ ಪೂಜಾರಿ, ಬೆಳ್ಮಣ್ಣು ಹರ್ಷ ಫ್ಯಾನ್ಸಿ ಗಿಫ್ಟ್
ಸೆಂಟರ್‌ನ ಮಾಲಕರಾದ ಮುರಳೀಧರ ಜೋಗಿ, ಪುಂಚಡ್ಕ ವೇದವ್ಯಾಸ ತಂತ್ರಿ,
ಪಡುಬೆಳ್ಮಣ್ಣು ಪ್ರಕಾಶ್ ಕುಲಾಲ್, ನಿಟ್ಟೆ-ಕೆಮ್ಮಣ್ಣು ರೋಟರಿ
ಸಮುದಾಯದಳದ ಅಧ್ಯಕ್ಷರಾದ ಕೆಮ್ಮಣ್ಣು ಪ್ರದೀಪ್ ಸುವರ್ಣ, ನಂದಳಿಕೆ
ಶ್ರೀ ಗುರುದುರ್ಗಾ ಮಿತ್ರ ಮಂಡಳಿಯ ಅಧ್ಯಕ್ಷ ಅಶ್ವಥ್ ಶೆಟ್ಟಿ,
ಪಡುಬೆಳ್ಮಣ್ಣು ಯುವಕ ಸಂಘದ ಅಧ್ಯಕ್ಷ ಉಮೇಶ್ ಆಚಾರ್ಯ, ಕೆದಿಂಜೆ
ರಾಜೇಶ್ ಶೆಟ್ಟಿ, ಬೆಳ್ಮಣ್ಣು ಅನಿತಾ ಪೂಜಾರಿ ಅವರು ಮುಖ್ಯ ಅತಿಥಿಯಾಗಿ
ಭಾಗವಹಿಸಿದ್ದರು.
ಎರಡು ದಿನಗಳ ಶಿಬಿರದಲ್ಲಿ ರಂಗ ನಿದೇರ್ಶಕರಾದ ಪಟ್ಲ ಸಂತೋಷ್
ನಾಯಕ್ ಅವರು ಮಕ್ಕಳ ರಂಗಭೂಮಿ ಮತ್ತು ಶಿಕ್ಷಣ ರಂಗ ತರಬೇತಿ
ಕಾರ್ಯಾಗಾರ ನಡೆಸಿಕೊಟ್ಟರು. ಆವೆ ಮಣ್ಣಿನ ಕಲಾಕೃತಿ ಕಲಾವಿದೆ ಕಾಪು
ರಕ್ಷಾ ಪೂಜಾರಿ ಆವೆ ಮಣ್ಣಿನ ಕಲಾಕೃತಿ ತಯಾರಿ ತರಬೇತಿ ನೀಡಿದರು. ಕೆದಿಂಜೆ
ಶಾಲಾ ನಿವೃತ್ತ ಶಿಕ್ಷಕರಾದ ಲಕ್ಷ್ಮೀ ನಾರಾಯಣ ಭಟ್ ಅವರು ಕಥೆ ಕೇಳೋಣ
ಬನ್ನಿ ಕಾರ್ಯಕ್ರಮದ ಮೂಲಕ ನೀತಿ ಕಥೆ ಬೋಧಿಸಿದರು. ಅಗ್ನಿ ಸುರಕ್ಷತೆ
ಮತ್ತು ಮುಂಜಾಗ್ರತೆ ಬಗ್ಗೆ ಪ್ರಾತ್ಯಕ್ಷಿಕೆ ವಿಶೇಷ ಕಾರ್ಯಕ್ರಮ
ನಡೆಯಿತು. ಅಂತರಾಷ್ಟ್ರೀಯ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ಪುರಸ್ಕೃತ ಬೋಳ
ಕೀರ್ತನ್ ಪೂಜಾರಿ ಪೇಪರ್ ಕ್ರಾಫ್ಟ್ ತರಬೇತಿ ನೀಡಿದರು. ರಾಜ್ಯ ಮಟ್ಟದ ಮಿಮಿಕ್ರಿ
ಕಲಾವಿದ ಮುದರಂಗಡಿ ಸುದರ್ಶನ್ ಆಚಾರ್ಯ ಅವರು ಮಿಮಿಕ್ರಿ ತರಬೇತಿ
ನೀಡಿದರು. ಜೇಸಿಐ ರಾಷ್ಟ್ರೀಯ ತರಬೇತುದಾರರಾದ ರಾಜೇಂದ್ರ ಭಟ್ ಕೆ.
ಅವರು ಆಟಗಳ ಮೂಲಕ ಕಲಿಕೆ, ಹಾಡೋಣ ನಲಿಯೋಣ ಕಾರ್ಯಾಗಾರ
ನಡೆಸಿಕೊಟ್ಟರು.
ಶಿಬಿರದಲ್ಲಿ 4 ರಿಂದ 18 ವರ್ಷ ವಯಸ್ಸಿನ 120ಕ್ಕೂ ಅಧಿಕ ವಿದ್ಯಾರ್ಥಿಗಳು
ಭಾಗವಹಿಸಿದ್ದರು. ವಿಶೇಷ ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ ಹಾಗೂ
ಪ್ರಾತ್ಯಕ್ಷಿಕೆ, ಬೇಸಿಗೆ ಬಿಸಿಲಿನಲ್ಲಿ ಮಕ್ಕಳ ಮನಸ್ಸಿಗೆ ಮುದ ನೀಡುವ, ಬುದ್ದಿಗೆ
ಇಂಬು ಕೊಡುವ, ಶರೀರಕ್ಕೆ ಚೈತನ್ಯ ಹರಿಸುವ ಮಕ್ಕಳ ಕನಸು ಚಿಗುರುವ
ಬೇಸಿಗೆ ಹಬ್ಬ ಅತ್ಯಂತ ಸಂಭ್ರಮದಿಂದ ಜರಗಿತು.
ಸಮಾರಂಭದಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ
ಫ್ರೆಂಡ್ಸ್ ಕ್ಲಬ್ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ,
ಸ್ಥಾಪಕಾಧ್ಯಕ್ಷರಾದ ಇನ್ನಾ ವಿಠಲ ಮೂಲ್ಯ, ನಿಕಟ ಪೂರ್ವಾಧ್ಯಕ್ಷರಾದ ಪ್ರಶಾಂತ್
ಪೂಜಾರಿ, ಪೂರ್ವಾಧ್ಯಕ್ಷರಾದ ಆನಂದ ಪೂಜಾರಿ, ಸುರೇಶ್ ಕಾಸ್ರಬೈಲು, ಸತೀಶ್
ಪೂಜಾರಿ, ಕಾರ್ಯದರ್ಶಿ ವೀಣಾ ಪೂಜಾರಿ, ಮಹಿಳಾ ಸಂಘಟನಾ ಕಾರ್ಯದರ್ಶಿ ಪದ್ಮಶ್ರೀ
ಪೂಜಾರಿ, ಬೆಳ್ಮಣ್ಣು ಜೇಸಿಐನ ಕಾರ್ಯದರ್ಶಿ ಸೌಜನ್ಯ ಕೋಟ್ಯಾನ್, ಯುವ ಜೇಸಿ
ವಿಭಾಗದ ಅಧ್ಯಕ್ಷೆ ಪೂರ್ವಿ ರಾವ್ ಮೊದಲಾದವರಿದ್ದರು.