
ಬೆಂಗಳೂರು: ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡುವ ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯ ಮೂರ್ತಿ ವಿ.ಶ್ರೀಷಾನಂದ ಅವರ ಪೀಠವು ಬಡವರಿಗಾಗಿ ರೂಪಿಸಲಾಗಿರುವ ‘ಅನ್ನಭಾಗ್ಯ’ ಯೋಜನೆಯ ಅಕ್ಕಿಯನ್ನು ಹೋಟೆಲ್‌ಗಳಿಗೆ ಮಾರುವ ಅಯೋಗ್ಯರ ವಿರುದ್ಧ ಜಿಲ್ಲಾಧಿಕಾರಿಗಳು ಮುಲಾಜಿಲ್ಲದೆ ಕ್ರಮ ಜರುಗಿಸಬೇಕು ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ.
ಅಕ್ಕಿ ಕಳ್ಳಸಾಗಣೆ ಮಾಡುವ ಡಾನ್‌ಗಳನ್ನು ರಾಜಕಾರಣಿಗಳು ರಕ್ಷಿಸಲು ಮುಂದಾಗುತ್ತಾರೆ. ಕಾನೂನನ್ನು ಎಷ್ಟೇ ಕಠಿಣಗೊಳಿಸಿದರೂ ಕಳ್ಳಸಾಗಣೆದಾರರು, ನಿನ್ನ ಮೊಣಕೈಗೆ ಹತ್ತಿರುವ ಜೇನು ಯೋಜನೆ ನ್ಯಾಯಪೀಠ, ತುಪ್ಪವನ್ನು ನಾನು ನೆಕ್ಕುತ್ತೇನೆ, ನನ್ನ ಮೊಣಕೈಗೆ ಮೆತ್ತಿರುವ ಜೇನುತುಪ್ಪವನ್ನು ನೀನು ನೆಕ್ಕು ಎಂಬಂತಹ ಮಟ್ಟಕ್ಕೆ ಇಳಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನ್ನಭಾಗ್ಯದಂತಹ ಜನಪರ ಯೋಜನೆ ನಿಜವಾದ ಬಡವರಿಗೆ ತಲುಪಬೇಕು. ಅನ್ಯಭಾಗ್ಯ ಯೋಜನೆ ಅಕ್ಕಿಯ ಕಳ್ಳಸಾಗಣೆ ನಿಯಂತ್ರಿಸಲು ಜಿಲ್ಲಾಧಿಕಾರಿಗಳು ಹೆಚ್ಚಿನ ನಿಗಾ ವಹಿಸಬೇಕು. ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಮುಲಾಜಿಲ್ಲದೆ ಕ್ರಮ ಜರುಗಿಸಬೇಕು ಎಂದು ನ್ಯಾಯಪೀಠ ಮೌಖಿಕವಾಗಿ ಸೂಚಿಸಿದೆ.