
ಅಖಿಲಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಕಳ ತಾಲೂಕು ಇವರ ವತಿಯಿಂದ ಬಲಿದಾನ್ ಟ್ರೋಫಿ 2025 ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾಟವು ಸ್ವರಾಜ್ ಮೈದಾನದಲ್ಲಿ ಉದ್ಘಾಟನೆಗೊಂಡಿತು.
ಉದ್ಘಾಟನೆಗೆ ಮುಖ್ಯಾ ಅತಿಥಿಗಳಾಗಿ ಯುವ ಉದ್ಯಮಿ ಅರುಣ್ ಕುಮಾರ್ ನಿಟ್ಟೆ ಆಗಮಿಸಿ ದೀಪಬೆಳಗಿಸುವ ಮೂಲಕ ಉದ್ಘಾಟಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಯುವವಕೀಲರಾದ ಶೀತಲ್ ಕುಮಾರ್ ಅವರು ವಿಶ್ವದ ಅತೀದೊಡ್ಡ ವಿದ್ಯಾರ್ಥಿ ಸಂಘಟನೆಯಾಗಿ ವಿದ್ಯಾರ್ಥಿ ಪರಿಷತ್ ಬೆಳೆದಿದ್ದು. ರಾಷ್ಟ್ಟೀಯವಾದ ಮತ್ತು ವಿದ್ಯಾರ್ಥಿ ಹಿತದ ಪರವಾಗಿ ಗಟ್ಟಿಧ್ವನಿಯಾಗಿ ವಿದ್ಯಾರ್ಥಿ ಪರಿಷತ್ ನಿಂತಿದೆ ಎಂದರು. ಈ ಸಂದರ್ಭದಲ್ಲಿ ಪ್ರಾಂತ ಖೇಲ್ ಪ್ರಮುಖ್ ಅಭಯ್, ತಾಲೂಕು ವಿದ್ಯಾರ್ಥಿನಿ ಪ್ರಮುಖ್ ಮನ್ವಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅತಿಥಿಗಳನ್ನು ತಾಲೂಕು ಸಹ ಸಂಚಾಲಕರಾದ ಸುಶಾನ್ ಕಾಂತಾವರ ಸ್ವಾಗತಿಸಿದರು. ಧೀರಜ್ ರವರು ಅತಿಥಿಗಳಿಗೆ ಧನ್ಯವಾದ ಸಮರ್ಪಿಸಿದರು. ಈ ಸಂದರ್ಭದಲ್ಲಿ ಸಂಘನೆಯ ಕಾರ್ಯಕರ್ತರು ಮತ್ತು ಹಿರಿಯ ಕಾರ್ಯಕರ್ತರು ಉಪಸ್ಥಿತರಿದ್ದರು.
