
ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಸೂಡ ಗ್ರಾಮದಲ್ಲಿ ಗೋಪಾಲ ಬಂಗೇರ ಇವರು ಅಕ್ರಮ ಸ್ಪೋಟಕ ಬಳಸಿ ಅಕ್ರಮ ಗಣಿಗಾರಿಕೆ ಮಾಡುತ್ತಿದ್ದಾರೆ ಎಂದು ಅಂದಿನ ಗಣಿಗಾರಿಕೆ ಅಧಿಕಾರಿ ನಿರಂಜನ್ ಇವರು ನೀಡಿದ ದೂರಿನ ಆದರದ ಮೇಲೆ ಕಾರ್ಕಳ ಗ್ರಾಮಾಂತರ ಪೊಲೀಸಿನವರು ಗೋಪಾಲ ಬಂಗೇರ ಇವರ ವಿರುದ್ಧ ಪ್ರಕರಣ ದಾಖಲಿಸಿದ್ದರು, ಪ್ರಕರಣದ ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಲಯ ಗೋಪಾಲ ಬಂಗೇರ ಇವರ ವಿರುದ್ಧ ಆರೋಪ ಸಾಬೀತು ಪಡಿಸಲು ಸಾಕ್ಷ್ಯಾಧಾರಗಳ ಕೊರತೆ ಪರಿಗಣಿಸಿ ಅವರನ್ನು ಪ್ರಕರಣದಿಂದ ದೋಷಮುಕ್ತಗೊಳಿಸಿ ಮಾನ್ಯ ನ್ಯಾಯಾಧೀಶರಾದ ಕೋಮಲ ಆರ್. ಸಿ. ಇವರು ತೀರ್ಪು ನೀಡಿರುತ್ತಾರೆ. ಆರೋಪಿಯಾದ ಗೋಪಾಲ ಬಂಗೇರ ಇವರ ಪರವಾಗಿ ಕಾರ್ಕಳದ ವಕೀಲರಾದ ರವಿಶಂಕರ್ ಬಿ. ಎಂ. ಇವರು ವಾದಿಸಿದ್ದರು.