
ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಜಕ್ಕನ ಮಕ್ಕಿ ಎಂಬಲ್ಲಿ ಸ್ವಿಫ್ಟ್ ಹಾಗು ಬೊಲೆರೋ ವಾಹನ ಅಪಘಾತಕ್ಕೀಡಾಗಿ ಓರ್ವ ಮೃತ ಪಟ್ಟ ಘಟನೆ ಸಂಭವಿಸಿದೆ.
ಬೆಳಿಗ್ಗೆ 8.20 ಕ್ಕೆ ಚಾಲಕನು ಸ್ವೀಪ್ಟ್ ಕಾರನ್ನು ಸೋಮೆಶ್ವರ ಕಡೆಯಿಂದ ಹೆಬ್ರಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಹೆಬ್ರಿ ಕಡೆಯಿಂದ ಓರ್ವ ಬೊಲೆರೋ ಚಾಲಕನು ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತಿರುವಿನಲ್ಲಿ ರಸ್ತೆ ಎಡಬಾಗದಲ್ಲಿ ಕಚ್ಚಾ ರಸ್ತೆ ಇದ್ದರೂ ರಸ್ತೆ ತೀರಾ ಬಲಭಾಗಕ್ಕೆ ಬಂದು ಸ್ವಿಪ್ಟ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ವಿಪ್ಟ್ ಕಾರಿನ ಚಾಲಕ ಮನೋಜ್ನಿಗೆ ತಲೆಗೆ ಹಾಗೂ ಕಾಲಿಗೆ ಗಾಯಗಳಾಗಿದೆ.
ಪ್ರಯಾಣಿಕರಾಗಿದ್ದ ಬಸ್ತೇವ್ (53) ಎಂಬವರಿಗೆ ತಲೆಗೆ ಪೆಟ್ಟಾಗಿದ್ದು, ಅಲ್ಲದೆ ಆಶಾ ಎಂಬವರಿಗೆ ಸೊಂಟ ಹಾಗೂ ಮಂಡಿಯಲ್ಲಿ ಹಾಗೂ ನಿಶಾ ಎಂಬವರಿಗೆ ಕಾಲಿನಲ್ಲಿ, ಅರ್ಪಿತಾ ಎಂಬವರಿಗೆ ಎಡ ಕೈ ಮತ್ತು ಕಾಲಿನಲ್ಲಿ ತರಚಿದ ಗಾಯವಾಗಿದ್ದು ಹಾಗೂ ಬಲ್ಯಾರೋ ಜೀಪಿನ ಚಾಲಕ ಬೀರಪ್ಪನಿಗೆ ತಲೆಗೆ ಪೆಟ್ಟಾಗಿದೆ.
ಗಾಯಾಳುಗಳನ್ನು ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗವ ಸಮಯ ಸ್ವಿಪ್ಟ್ ಕಾರಿನಲ್ಲಿದ್ದ ಬಸ್ತೇವ್ ಎಂಬವರು ಆಸ್ಪತ್ರೆಗೆ ಹೋಗುವಾಗ ದಾರಿ ಮದ್ಯೆ ಮೃತಪಟ್ಟಿದ್ದು ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 17/2025 US 281,125(a) 125(b) 106 ಬಿಎನ್ಎಸ್ ರಂತೆ ಪ್ರಕರಣ ದಾಖಲಿಸಲಾಗಿದೆ.



















