
ಹೀಲಿಂಗ್ ಹ್ಯಾಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) ಪರೋಪಕಾರಂ ಇದಂ ಸೇವಾ ಇದರ ಪ್ರಥಮ ವರ್ಷದ ವಾರ್ಷಿಕೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮ ಇಂದು ಕಾರ್ಕಳ ಅಯ್ಯಪ್ಪನಗರದಲ್ಲಿರುವ ವಿಜೇತ ವಿಶೇಷ ಶಾಲೆಯಲ್ಲಿ ನೆರವೇರಿತು.
ನಿಸ್ವಾರ್ಥ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಶ್ರೀ ಈಶ್ವರ್ ಮಲ್ಪೆ ಹಾಗೂ ವಿಜೇತ ವಿಶೇಷ ಶಾಲಾ ಸಂಸ್ಥಾಪಕಿ ಡಾ.ಹರೀಶ್ ಇವರನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಿ ಗೌರವಿಸಿದರು.

ಸಂಸ್ಥೆಯ 10ನೇ ಸೇವಾ ಯೋಜನೆಯ ಅಂಗವಾಗಿ ಸವಿನ್ ಎಂಬ ಮಗುವಿನ ಚಿಕಿತ್ಸೆಗೆ 25 ಸಾವಿರ ಸಹಾಯಹಸ್ತವನ್ನು ನೀಡಿದರು.
ಈ ಸಂದರ್ಭದಲ್ಲಿ ಅಂಚೆ ಇಲಾಖೆ ಪುತ್ತೂರು ಮಾರ್ಕೆಟಿಂಗ್ ಮ್ಯಾನೇಜರ್ ಗುರುಪ್ರಸಾದ್, ಮಿಥುನ್ ಶೆಟ್ಟಿ, ಮೂಡಬಿದ್ರೆ ವಕೀಲರಾದ ಜಯಪ್ರಕಾಶ್ ಭಂಡಾರಿ, ಹೀಲಿಂಗ್ ಹ್ಯಾಂಡ್ಸ್ ಚಾರಿಟೇಬಲ್ ಟ್ರಸ್ಟಿ ರಿ. ಸದಸ್ಯರಾದ ಲೀನಾ ಫೆರಾವ್, ಜ್ಞಾನ್ ಪ್ರಕಾಶ್,ಅಧ್ಯಕ್ಷರಾದ ಪ್ರಜ್ವಲ್ ಕುಲಾಲ್, ಹಾಗೂ ಟ್ರಸ್ಟಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.













