
ಬೆಂಗಳೂರು: ಬಸ್ ಟಿಕೆಟ್ ದರ, ಮೆಟ್ರೋ ಪ್ರಯಾಣ ದರ ಏರಿಕೆ ಜೊತೆಗೆ ಇನ್ನು ಹಾಲಿನ ದರವೂ ಸಹ ಏರಿಕೆಯಾಗುವ ಸೂಚನೆಯನ್ನು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ನೀಡಿದ್ದಾರೆ.
ಒಂದು ವಾರದಿಂದ ಹತ್ತು ದಿನಗಳಲ್ಲಿ ಹಾಲಿನ ದರ 5 ರೂ. ಏರಿಕೆ ಮಾಡಬಹುದು. ಪರಿಷ್ಕೃತ ಹಾಲಿನ ದರ ಹೆಚ್ಚಳ ಮಾಡುವಾಗಲೇ ಹೆಚ್ಚುವರಿ ಹಾಲಿನ ದರ ಕಡಿತ ಜೊತೆಗೆ 50 ML ಹಾಲು ಕಡಿತ ಮಾಡಲಾಗುತ್ತದೆ. ಹೆಚ್ಚುವರಿ ಹಾಲಿನ ದರ 2 ರೂ. ಇದ್ದು, ಅದು ಕಡಿತವಾಗಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.



















