
ಹಸುವಿನ ಕೆಚ್ಚಲು ಕೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ 11ರ ಸ್ಪರ್ಧಿ ಚೈತ್ರಾ ಕುಂದಾಪುರ ಪ್ರತಿಕ್ರಿಯೆ ನೀಡಿದ್ದಾರೆ.
ಗೋವು ಎಂದರೆ ದೇವಸ್ಥಾನ ಇದ್ದಹಾಗೆ, ಮುಕ್ಕೋಟಿ ದೇವತೆಗಳ ಆವಾಸ ಸ್ಥಾನ ಅಂತ ನಾನು ನಂಬುತ್ತೇನೆ. ಈ ಘಟನೆಯನ್ನು ನಾನು ಕಠಿಣ ಶಬ್ದಗಳಿಂದ ಖಂಡಿಸುತ್ತೇನೆ. ಕುಡಿದ ಮತ್ತಿನಲ್ಲಿ ಮಾಡಿದ್ದಾರೆ ಎಂದೆಲ್ಲ ತೇಪೆ ಹಚ್ಚುವ ಕೆಲಸ ನಡೆಯುತ್ತಿದೆ. ಇದು ಉದ್ದೇಶಪೂರ್ವಕವಾಗಿಯೇ ನಡೆದಿದೆ. ಆದರಿಂದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದಿದ್ದಾರೆ.
ನಮಗೆ ಜೀವನಪೂರ್ತಿ ಹಾಲನ್ನು ಕೊಟ್ಟು ಸಾಕುವ ಗೋವಿನಕೆಚ್ಚಲು ಕೊಯ್ಯುವ ವಿಕೃತಿ ಮೆರೆಯುತ್ತಾರೆ ಎಂದಾದರೆ ನಾಳೆ ಅವರು ಮನುಷ್ಯರ ಮೇಲೆಯೂ ದಾಳಿ ನಡೆಸಬಹುದು. ಸರಕಾರ ಮಾಲೀಕರ ಆರ್ಥಿಕ ಸಂಕಷ್ಟ ಹಾಗೂ ಅವರ ಭಾವನಾತ್ಮಕ ಬಾಂಧವ್ಯಕ್ಕೆ ಬೆಲೆ ಕೊಡಬೇಕು ಈ ಘಟನೆಯ ಬಗ್ಗೆ ಪ್ರಾಣಿ ದಯಾ ಸಂಘದವರು ಖಂಡಿಸಬೇಕು. ತಾಯಿಯ ಎದೆ ಹಾಲನ್ನು ನಾವು ಮೂರು ವರ್ಷ ಕುಡಿದರೆ, ಜನ್ಮಪೂರ್ತಿ ನಾವು ಗೋವಿನ ಹಾಲನ್ನೇ ಕುಡಿಯುತ್ತೇವೆ ಆದ್ದರಿಂದ ವಿಕೃತಿ ಮೆರೆದವರಿಗೆ ಶಿಕ್ಷೆಯಾಗಬೇಕು ಎನ್ನುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.



















