24.3 C
Udupi
Friday, March 13, 2026
spot_img
spot_img
HomeBlogಹಬ್ಬದ ಸಂಭ್ರಮದಲ್ಲಿರುವ ಜನತೆಗೆ ಮತ್ತೆ ಬೆಲೆ ಏರಿಕೆ ಶಾಕ್: ಅಡುಗೆ ಎಣ್ಣೆ ಬೆಲೆ ಹೆಚ್ಚಳ

ಹಬ್ಬದ ಸಂಭ್ರಮದಲ್ಲಿರುವ ಜನತೆಗೆ ಮತ್ತೆ ಬೆಲೆ ಏರಿಕೆ ಶಾಕ್: ಅಡುಗೆ ಎಣ್ಣೆ ಬೆಲೆ ಹೆಚ್ಚಳ

ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು ಹಬ್ಬದ ಸಂಭ್ರಮಾಚರಣೆಗೆ ಸಿದ್ಧತೆ ನಡೆಸುತ್ತಿರುವ ಜನತೆಗೆ ಇದೀಗ ಬೆಲೆ ಏರಿಕೆಯ ಶಾಕ್ ತಗುಲಿದೆ. ಈಗಾಗಲೇ ಅಗತ್ಯ ವಸ್ತು, ತರಕಾರಿ ಬೆಲೆ ಏರಿಕೆಯಾಗಿರುವ ನಡುವೆಯೇ ಪುನಃ ಅಡುಗೆ ಎಣ್ಣೆ ದರ ಹೆಚ್ಚಾಗಿದೆ.

ಕಳೆದ ತಿಂಗಳಷ್ಟೇ ಕೇಂದ್ರ ಸರ್ಕಾರ ಅಡುಗೆ ಎಣ್ಣೆಯ ಆಮದು ಸುಂಕವನ್ನು ಶೇ.20ರಷ್ಟು ಹೆಚ್ಚಳ ಮಾಡಿದ್ದರಿಂದ ಏಕಾಏಕಿ ಅಡುಗೆ ಎಣ್ಣೆ ದರ ₹20ರಿಂದ ₹25ರವರೆಗೆ ಹೆಚ್ಚಳವಾಗಿತ್ತು. ಇದೀಗ ಮತ್ತೆ ಏರಿಕೆಯಾಗಿರುವುದು ಬಡ ಹಾಗೂ ಮಾಧ್ಯಮ ವರ್ಗದ ಜನತೆಯನ್ನು ಕಂಗೆಡಿಸಿದೆ.

ಸಗಟು ದರದಲ್ಲಿ ಪ್ರತಿ ಲೀಟರ್‌ ಸೂರ್ಯಕಾಂತಿ ಎಣ್ಣೆ ದರ ₹8, ತಾಳೆಎಣ್ಣೆ ₹3, ಸೋಯಾಬಿನ್‌ ಎಣ್ಣೆ ಕೇಜಿಗೆ ₹18, ಸನ್‌ಫ್ಲವರ್‌ ಎಣ್ಣೆ ₹20, ಸಾಸಿವೆ ಎಣ್ಣೆ ₹22 ಹೆಚ್ಚಳವಾಗಿದೆ. ವ್ಯಾಪಾರಸ್ಥರು ಹಬ್ಬದ ನಡುವೆ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ದಾಸ್ತಾನು ಕೊರತೆಯಿದೆ ಎಂದು ಹೇಳುತ್ತಿದ್ದರೆ ಇದನ್ನು ಒಪ್ಪದ ಗ್ರಾಹಕರು ಹಬ್ಬದ ನೆಪದಲ್ಲಿ ದರ ಹೆಚ್ಚು ಮಾಡಲಾಗಿದೆ. ಗೋದಾಮುಗಳಲ್ಲಿ ದಾಸ್ತಾನು ಇದ್ದರೂ ಕೊಡದೆ ಕೃತಕ ಅಭಾವ ಸೃಷ್ಟಿಸಿ ದರ ಹೆಚ್ಚಿಸಲಾಗಿದ್ದು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಈ ಬಗ್ಗೆ ಕ್ರಮ ವಹಿಸುವಂತೆ ಆಗ್ರಹಿಸಿದ್ದಾರೆ.

ಅಡುಗೆ ಎಣ್ಣೆ ದರ ಏರಿಕೆಯು ಸಿಹಿ ತಿನಿಸು, ಖಾರ ಸೇರಿದಂತೆ ತಿನಿಸುಗಳ ಬೆಲೆ ಏರಿಕೆಗೂ ಕಾರಣವಾಗಬಹುದು. ಇದರ ಜೊತೆಗೆ ಹೋಟೆಲ್‌ ಉದ್ಯಮದ ಮೇಲೂ ಪರಿಣಾಮ ಬೀರಲಿದೆ. ಆದರೆ, ಸದ್ಯಕ್ಕೆ ದೀಪಾವಳಿ ಮುಗಿಯುವವರೆಗೆ ದರ ಹೆಚ್ಚಿಸುವುದಿಲ್ಲ ಎಂದು ಹೋಟೆಲ್‌ ಮಾಲೀಕರು ತಿಳಿಸಿದ್ದಾರೆ.

ಕಳೆದ ವಾರದ ಬೆಲೆ ಈಗಿನ
ದರ

ಸನ್ ಪ್ಯೂರ್ ₹125 ₹135
ಗೋಲ್ಡ್ ವಿನ್ನರ್ ₹126 ₹136
ಫಾರ್ಚ್ಯೂನ್ ₹130 ₹136
ಪಾಮ್‌ ಆಯಿಲ್₹115 ₹125
ಜೆಮಿನಿ. ₹140 ₹145

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page