
ಕಾರ್ಕಳ: ಸ್ವಚ್ಛ ಕಾರ್ಕಳ ಬ್ರಿಗೇಡ್‌ನ ವಿನೂತನ ಪ್ರಯತ್ನವಾಗಿ ಫಲಕಗಳ ಸ್ವಚ್ಛತಾ ಅಭಿಯಾನದ ಮೊದಲ ಹಂತ ಇಂದು ಭಾನುವಾರ, ದಿನಾಂಕ 05 ಏಪ್ರಿಲ್ 2026 ರಂದು ಬೆಳಿಗ್ಗೆ 6:30 ರಿಂದ 8:30 ರವರೆಗೆ ನಡೆಯಿತು.

ಈ ಕಾರ್ಯಕ್ರಮದಲ್ಲಿ ಬ್ರಿಗೇಡ್‌ನ ಸದಸ್ಯರು ಸಕ್ರಿಯವಾಗಿ ಭಾಗವಹಿಸಿ, ನಗರದ ದಾನಶಾಲೆಯಿಂದ ಕಾಳಿಕಾಂಬ ರಸ್ತೆಯ ವಿವಿಧ ಪ್ರದೇಶಗಳಲ್ಲಿ ಸುಮಾರು 15 ರಿಂದ 20 ನಾಮಫಲಕಗಳ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.
ಈ ಅಭಿಯಾನದ ಮೂಲಕ ಸಾರ್ವಜನಿಕರಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವುದರೊಂದಿಗೆ, ರಸ್ತೆ ಮತ್ತು ಪರಿಸರದ ಜೊತೆಗೆ ಸಾರ್ವಜನಿಕ ಫಲಕಗಳ ಸ್ವಚ್ಛತೆಯೂ ಅಷ್ಟೇ ಮುಖ್ಯ ಎಂಬ ಸಂದೇಶವನ್ನು ನೀಡಲಾಯಿತು.

ಸ್ವಚ್ಛ ಕಾರ್ಕಳ ಬ್ರಿಗೇಡ್ ಮುಂದಿನ 4 ಭಾನುವಾರ ಈ ಸಮಾಜಮುಖಿ ಕಾರ್ಯಕ್ರಮವನ್ನು ಇನ್ನಷ್ಟು ವ್ಯಾಪಕವಾಗಿ ನಡೆಸಲು ನಿರ್ಧರಿಸಿದೆ.
ಆರಾಮ್ ಇಂಡಸ್ಟ್ರೀಸ್ ನ ಮಾಲಕರಾದ ಶ್ರೀಯೋಗೀಶ್ ನಾಯಕ್ ರವರು ಸ್ವಚ್ಛತಾ ಪರಿಕರಗಳನ್ನು ಕೊಟ್ಟು ಸಹಕರಿಸಿದರು.











