28.5 C
Udupi
Monday, April 13, 2026
spot_img
spot_img
HomeBlogಸುಳ್ಳು ಹೇಳಿಕೆಯಿಂದ ಕಾರ್ಕಳದ ಜನರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ, ಉಡುಪಿ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಅಮಾನತಿನಿಂದ ಸಾಬೀತು

ಸುಳ್ಳು ಹೇಳಿಕೆಯಿಂದ ಕಾರ್ಕಳದ ಜನರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ, ಉಡುಪಿ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಅಮಾನತಿನಿಂದ ಸಾಬೀತು

ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಹವಾಲ್ದಾರ್ ಬೆಟ್ಟು ಹೇಳಿಕೆ

ನಕಲಿ ಪರಶುರಾಮ ಮೂರ್ತಿಯನ್ನು ನಿರ್ಮಿಸಿದ ಕ್ರಿಶ್ ಆರ್ಟ್ ವರ್ಲ್ಡ್ ರ ಮಾಲಕ ಕೃಷ್ಣ ನಾಯಕ್ ರವರ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಸರಕಾರದ ಹಣದ ದುರುಪಯೋಗ ಮಾಡಿದಕ್ಕಾಗಿ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದರೂ ಕಾರ್ಕಳದ ಶಾಸಕರಾದ ವಿ ಸುನಿಲ್ ಕುಮಾರ್ ರವರು ಈ ಕುರಿತು ಕಾರ್ಕಳ ಪೊಲೀಸರಿಂದ ತನಿಖೆ ಮಾಡಲು ಒತ್ತಾಯಿಸದೆ ಸಿಐಡಿ ವಿಚಾರಣೆಗೆ ಸ್ಟೇ ತಂದಿರುವುದನ್ನು ಜನರಿಗೆ ತಿಳಿಸದೇ ತೆರೆಮರೆಯಲ್ಲಿ ಕೃಷ್ಣ ನಾಯಕ್ ರವರಿಗೆ ಪರೋಕ್ಷ ಬೆಂಬಲ ನೀಡುತ್ತಾ ತನಿಖೆ ಮಾಡಿ ತನಿಖೆ ಮಾಡಿ ಅಂದರೆ ಏನರ್ಥ ?? ಹಾಗೂ ಈ ರೀತಿಯ ಅಸಂಬದ್ದ ಹೇಳಿಕೆಗಳನ್ನು ಒಬ್ಬ ಜನಪ್ರತಿನಿಧಿಯಾಗಿ ಹೇಳುತ್ತಿರುವುದು ಯಾವ ಕಾರಣಕ್ಕಾಗಿ ಎನ್ನುವುದೇ ಯಕ್ಷ ಪ್ರಶ್ನೆಯಾಗಿ ನಿಮ್ಮನ್ನು ನಂಬಿದ್ದ ಜನರನ್ನು ಕಾಡುತ್ತಿದೆ.


ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರ ಜಾರಿಗೆ ತಂದ GST ತೆರಿಗೆ ಪದ್ದತಿಯಲ್ಲಿ ತೆರಿಗೆಯನ್ನು ವಂಚಿಸಿದ ಅಕ್ರಮ ಹಣ ವರ್ಗಾವಣೆ ಮಾಡಿ ಪರಶುರಾಮನ ನಕಲಿ ಮೂರ್ತಿಯನ್ನು ನಿರ್ಮಿಸಿದ ಕ್ರಿಶ್ ಆರ್ಟ್ ವರ್ಲ್ಡ್ ರ ಮಾಲಕ ಕೃಷ್ಣ ನಾಯಕ್ ರವರು GST ಕಟ್ಟದೆ ಇರುವುದು ಕಾರ್ಕಳದ ಶಾಸಕರಾದ ವಿ ಸುನಿಲ್ ಕುಮಾರ್ ರವರ ಸಮಸ್ಯೆ ಅಲ್ಲ ಎಂದು ಬೈಲೂರಿನಲ್ಲಿ ನೆಡೆದ ಜನಾಗ್ರಹ ಸಭೆಯಲ್ಲಿ ಮಾತನಾಡಿರುವುದು ಅವರ ಶಾಸಕ ಸ್ಥಾನಕ್ಕೆ ಶೋಭೆ ತರುವುದಿಲ್ಲ ಹಾಗೂ ಮಾನ್ಯ ಉಚ್ಛ ನ್ಯಾಯಾಲಯ ಪರಶುರಾಮ ಮೂರ್ತಿಯನ್ನು ಹಸ್ತಾಂತರ ಮಾಡಲು ಆದೇಶ ಮಾಡಿದೆ ಎಂದು ಬೈಲೂರಿನ ಜನಾನುಗ್ರಹ ಸಭೆಯಲ್ಲಿ ಬೊಬ್ಬೆ ಹೊಡೆದ ಕಾರ್ಕಳದ ಶಾಸಕರ ಸ್ವಯಂ ಘೋಷಿತ ಹಿಂಬಾಲಕರು ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ಮೂರ್ತಿಯನ್ನು ತೆಗೆದುಕೊಂಡು ಹೊಗಲು ಆಗದಿರುವುದಕ್ಕೆ ಯಾಕೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಿಲ್ಲ??
ಪ್ರಸ್ತುತ ಕೃಷ್ಣ ನಾಯಕ್ ರವರ ಪರವಾಗಿ ಕಾರ್ಕಳದ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲು ತಮ್ಮ ಹಿಂಬಾಲಕನ ಮುಖಾಂತರ ಸೂಚನೆ ನೀಡಿರುವುದು ಯಾರು ಎನ್ನುವುದನ್ನು ಕಾರ್ಕಳದ ಶಾಸಕರಾದ ವಿ ಸುನಿಲ್ ಕುಮಾರ್ ರವರು ಜನತೆಗೆ ಉತ್ತರಿಸಬೇಕಾಗಿದೆ. ಉಡುಪಿಯ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿಯವರಾದ ಅರುಣ್ ಕುಮಾರ್ ರವರು ಅಮಾನತ್ತು ಗೊಂಡಿದ್ದರೂ ಸಹ ಕಾರ್ಕಳದ ಶಾಸಕರಾದ ಸುನಿಲ್ ಕುಮಾರ್ ರವರು ತಮ್ಮ ಬೆಂಬಲಿಗರ ಮೂಲಕ ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡುವುದು ಹಾಗೂ ವಾಟ್ಸ್ ಅಪ್ ಮೂಲಕ ಸುಳ್ಳು ವಿಚಾರಗಳನ್ನು ಹಬ್ಬಿಸುವುದನ್ನು ನಿಲ್ಲಿಸಿ ಸತ್ಯವನ್ನು ಒಪ್ಪಿಕೊಳ್ಳುವ ದೊಡ್ಡತನವನ್ನು ತೋರಬೇಕು ಎಂದು ಕಾರ್ಕಳದ ಸಮಸ್ತ ಜನತೆಯ ಪರವಾಗಿ ಆಗ್ರಹ ಮಾಡುತ್ತೇನೆ ಎಂದು ಕಾರ್ಕಳ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಹವಾಲ್ದಾರ್ ಬೆಟ್ಟು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page